ಮಿಝೋರಾಂ: ಇಂಧನ ಟ್ಯಾಂಕರ್‌ಗೆ ಬೆಂಕಿ ತಗುಲಿ 4 ಮಂದಿ ಸಾವು, 12 ಜನರಿಗೆ ಗಾಯ
Update: 2022-10-30 12:06 IST
ಗುವಾಹಟಿ: ಮಿಝೋರಾಂನ ತುಯಿರಿಯಾಲ್ ಏರ್‌ಫೀಲ್ಡ್ ಬಳಿ ಶನಿವಾರ ಸಂಜೆ ತೈಲ ಸಾಗಿಸುತ್ತಿದ್ದ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಹಾಗೂ ಸುಮಾರು ಒಂದು ಡಝನ್ ಜನರು ಗಾಯಗೊಂಡಿದ್ದಾರೆ.
ರಾಜ್ಯದ ರಾಜಧಾನಿ ಐಝ್ವಾಲ್‌ನಿಂದ ಪೂರ್ವಕ್ಕೆ 18 ಕಿಲೋಮೀಟರ್ ದೂರದಲ್ಲಿರುವ ತುಯಿರಿಯಲ್ ಗ್ರಾಮದಲ್ಲಿ ಸಂಜೆ 6 ಗಂಟೆ ಸುಮಾರಿಗೆ ಇಂಧನ ಟ್ಯಾಂಕರ್ ಚಂಫೈಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಗಾಯಗೊಂಡವರು ಅಥವಾ ಮೃತಪಟ್ಟವರು ಎಂದು ಭಾವಿಸಲಾದವರಲ್ಲಿ ಹಲವರು ಇಂಧನ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದರೆ, ಇತರರು ಧ್ವಂಸಗೊಂಡ ಟ್ಯಾಂಕರ್‌ನಿಂದ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಮೂರು ದ್ವಿಚಕ್ರ ವಾಹನಗಳು ಮತ್ತು ಒಂದು ಟ್ಯಾಕ್ಸಿ ಕೂಡ ಬೆಂಕಿಗೆ ಆಹುತಿಯಾಗಿದೆ.