ಬ್ರಿಟನ್: ಸರಕಾರಿ ಕೇಂದ್ರಕ್ಕೆ ದಾಳಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

Update: 2022-10-30 18:20 GMT

ಲಂಡನ್, ಅ.30: ಇಂಗ್ಲೆಂಡ್‌ನ ದಕ್ಷಿಣದಲ್ಲಿರುವ ಬಂದರು ನಗರ ಡೊವರ್‌ನಲ್ಲಿರುವ ವಲಸಿಗರ ಪ್ರಕ್ರಿಯೆ ಕೇಂದ್ರಕ್ಕೆ ಪೆಟ್ರೋಲ್ ಬಾಂಬ್‌ಗಳನ್ನು ಎಸೆದ ವ್ಯಕ್ತಿ ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ‘ರಾಯ್ಟರ್ಸ್’ ವರದಿ ಮಾಡಿದೆ.

ಕಾರನ್ನು ಚಲಾಯಿಸಿಕೊಂಡು ಬಂದ ಬಿಳಿಯ ವ್ಯಕ್ತಿ ವಲಸಿಗರ ಪ್ರಕ್ರಿಯೆ ಕೇಂದ್ರದತ್ತ ಮೂರು ಪೆಟ್ರೋಲ್ ಬಾಂಬ್‌ಗಳನ್ನು ಎಸೆದಿದ್ದಾನೆ. ಅದರಲ್ಲಿ ಒಂದು ಸ್ಫೋಟಿಸಿಲ್ಲ. ಬಳಿಕ ತನ್ನ ವಾಹನದೊಂದಿಗೆ ಪಕ್ಕದಲ್ಲಿದ್ದ ಪೆಟ್ರೋಲ್ ಬಂಕ್‌ಗೆ ತೆರಳಿ, ಅಲ್ಲಿದ್ದ ಕಂಬಕ್ಕೆ ಒಂದು ಹಗ್ಗ ಕಟ್ಟಿ, ಅದರ ಮತ್ತೊಂದು ತುದಿಯನ್ನು ತನ್ನ ಕುತ್ತಿಗೆಗೆ ಬಿಗಿದು ವಾಹನ ಚಲಾಯಿಸಿದಾಗ ಕುತ್ತಿಗೆ ಬಿಗಿದು ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

Similar News