H-1B ಮತ್ತು H-4 ವೀಸಾ ಅರ್ಜಿದಾರರಿಗೆ ವಿಳಂಬದ ಚಿಂತೆ; ಸಾಮಾಜಿಕ ಮಾಧ್ಯಮಗಳ ಪರಿಶೀಲನೆಯ ಆತಂಕ
ಸಾಂದರ್ಭಿಕ ಚಿತ್ರ
H-1B ಮತ್ತು H-4 ವೀಸಾ ಅರ್ಜಿದಾರರ ಸಾಮಾಜಿಕ ಜಾಲತಾಣಗಳು ಮತ್ತು ಆನ್ಲೈನ್ ಪ್ರೊಫೈಲ್ ಗಳನ್ನು ಪರಿಶೀಲಿಸುತ್ತಿರುವ ಕಾರಣದಿಂದ ವೀಸಾ ನೀಡುವಲ್ಲಿ ವಿಳಂಬ ಸಂಭವಿಸಬಹುದು ಎಂದು ಅಮೆರಿಕ ಹೇಳಿದೆ.
ಜಾಗತಿಕವಾಗಿ H-1B ಮತ್ತು H-4 ವೀಸಾ ಅರ್ಜಿದಾರರಿಗೆ ವೀಸಾ ನೀಡುವ ಮೊದಲು ಅವರ ಸಾಮಾಜಿಕ ಮಾಧ್ಯಮ ಮತ್ತು ಆನ್ಲೈನ್ ಪ್ರೊಫೈಲ್ ಪರೀಕ್ಷಿಸುವುದನ್ನು ಆರಂಭಿಸಿರುವ ಕಾರಣ ನೂರಾರು ಭಾರತೀಯ ವೃತ್ತಿಪರರಿಗೆ ವೀಸಾ ಸಿಗುವಲ್ಲಿ ವಿಳಂಬವಾಗುತ್ತಿದೆ ಎಂದು ಭಾರತದ ಅಮೆರಿಕದ ರಾಯಭಾರ ಕಚೇರಿ ಹೇಳಿದೆ.
H-1B ಮತ್ತು H-4 ವೀಸಾ ಅರ್ಜಿದಾರರ ಸಾಮಾಜಿಕ ಜಾಲತಾಣಗಳು ಮತ್ತು ಆನ್ಲೈನ್ ಪ್ರೊಫೈಲ್ ಗಳನ್ನು ಪರಿಶೀಲಿಸುತ್ತಿರುವ ಕಾರಣದಿಂದ ವೀಸಾ ನೀಡುವಲ್ಲಿ ವಿಳಂಬ ಸಂಭವಿಸಬಹುದು. ನೂರಾರು ಭಾರತೀಯ ವೃತ್ತಿಪರರಿಗೆ ಅದೇ ಕಾರಣದಿಂದ ವೀಸಾ ನೀಡುವುದು ತಡವಾಗುತ್ತಿದೆ. ಹೀಗಾಗಿ ವಿಳಂಬದ ಸಮಯವನ್ನು ನಿರೀಕ್ಷೆಯಲ್ಲಿಟ್ಟು ಸಾಧ್ಯವಾದಷ್ಟು ಬೇಗನೇ ವೀಸಾಗೆ ಅರ್ಜಿ ಹಾಕಬೇಕು ಎಂದು ರಾಯಭಾರ ಕಚೇರಿ ಹೇಳಿದೆ.
►ಏನಿದು ವೀಸಾ ವಿಳಂಬ?
“ಜಾಗತಿಕವಾಗಿ H-1B ಮತ್ತು H-4 ವೀಸಾ ಅರ್ಜಿದಾರರಿಗೆ ನೀಡಲಾಗಿರುವ ಅಲರ್ಟ್” ಎನ್ನುವ ತಲೆಬರಹದಡಿ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ರಾಯಭಾರ ಕಚೇರಿ ಈ ವಿವರವನ್ನು ನೀಡಿದೆ. “ಡಿಸೆಂಬರ್ 15ರಿಂದ ರಾಷ್ಟ್ರೀಯ ಇಲಾಖೆಯು H-1B ಮತ್ತು H-4 ವೀಸಾ ಅರ್ಜಿದಾರರ ಆನ್ಲೈನ್ ಪ್ರಸ್ತುತಿಯನ್ನು ವಿಶ್ಲೇಷಿಸುವುದನ್ನು ಆರಂಭಿಸಿದೆ. ವೀಸಾ ಪರಿಶೀಲನೆಯ ಭಾಗವಾಗಿ ಇದನ್ನು ಮಾಡಲಾಗುತ್ತಿದೆ. ಈ ಪರಿಶೀಲನೆಯನ್ನು ಜಾಗತಿಕವಾಗಿ ಎಲ್ಲಾ H-1B ಮತ್ತು H-4 ವೀಸಾ ಅರ್ಜಿದಾರರಿಗೂ ಮತ್ತು ಎಲ್ಲಾ ದೇಶದ ಪ್ರಜೆಗಳಿಗೂ ಸಮಾನವಾಗಿ ನಡೆಸಲಾಗುತ್ತಿದೆ. ಕಂಪೆನಿಗಳಿಗೆ ಅತ್ಯುತ್ತಮ ತಾತ್ಕಾಲಿಕ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅವಕಾಶ ಕೊಡುವ ಜೊತೆಗೆ H-1B ವೀಸಾವನ್ನು ದುರುದ್ದೇಶಕ್ಕೆ ಬಳಸಿಕೊಳ್ಳುವುದನ್ನು ತಪ್ಪಿಸಲು ಈ ಪ್ರಯತ್ನ ಮಾಡಲಾಗುತ್ತಿದೆ. ಅಮೆರಿಕದ ರಾಯಭಾರ ಕಚೇರಿಗಳು H-1B ಮತ್ತು H-4 ವೀಸಾ ಅರ್ಜಿದಾರರ ಅರ್ಜಿಗಳನ್ನು ಸ್ವೀಕರಿಸುವುದನ್ನು ಮುಂದುವರಿಸಲಿವೆ. ಅರ್ಜಿದಾರರು ಸಾಧ್ಯವಾದಷ್ಟು ಬೇಗನೇ ಅರ್ಜಿ ಹಾಕುವಂತೆ ನಾವು ಪ್ರೋತ್ಸಾಹಿಸುತ್ತೇವೆ. ಏಕೆಂದರೆ ವೀಸಾ ವರ್ಗೀಕರಣಕ್ಕೆ ಹೆಚ್ಚುವರಿ ಪರಿಶೀಲನಾ ಅಗತ್ಯವಿರುವ ಕಾರಣ ಅದನ್ನು ನಿರೀಕ್ಷೆಯಲ್ಲಿಟ್ಟುಕೊಂಡು ಅರ್ಜಿ ಹಾಕಬೇಕಾಗುತ್ತದೆ” ಎಂದು ತಿಳಿಸಿದೆ.
►ರದ್ದಾಗಿರುವ ಸಂದರ್ಶನ ಅರ್ಜಿಗಳು
ಡಿಸೆಂಬರ್ನಲ್ಲಿ ಭಾರತಕ್ಕೆ ಆಗಮಿಸಿದ H-1B ವೀಸಾ ಹೊಂದಿರುವ ಅನೇಕರು ಮರಳಿ ಹೋಗಲು ಸಾಧ್ಯವಾಗದಂತೆ ದೇಶದಲ್ಲೇ ಉಳಿದಿದ್ದಾರೆ. ಅವರ ಸಂದರ್ಶನ ಅರ್ಜಿಗಳು ರದ್ದಾಗಿವೆ. ಮಾರ್ಚ್, ಏಪ್ರಿಲ್ ಅಥವಾ ಮೇಯವರೆಗೆ ಅರ್ಜಿಗಳು ವಿಳಂಬವಾಗುವ ಸಾಧ್ಯತೆಯಿದೆ. ಮಾನ್ಯತೆ ಹೊಂದಿರುವ ವೀಸಾ ಇಲ್ಲದವರು ಅನೇಕರು ಅಮೆರಿಕದಲ್ಲಿರುವ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
►ಪರೀಕ್ಷೆ ಸಮಯ ವಿಸ್ತರಿಸಿರುವುದೇಕೆ?
ಅಮೆರಿಕದ ಅಧಿಕಾರಿಗಳ ಪ್ರಕಾರ H-1B ವೀಸಾದಡಿ ಸುಳ್ಳು ಪ್ರಮಾಣಪತ್ರಗಳಿಂದ ಕೆಲಸ ಮಾಡುವವರನ್ನು ಹೊರಗಿಡಲು ಈ ಪರಿಶೀಲನೆ ನಡೆಸಲಾಗುತ್ತಿದೆ. ಜೊತೆಗೆ ಅಮೆರಿಕದ ಕಂಪೆನಿಗಳಲ್ಲಿ ನುರಿತ ವಿದೇಶಿ ಕಾರ್ಮಿಕರನ್ನು ಹುಡುಕುವುದೂ ಈಗಿನ ಪರಿಶೀಲನೆಯ ಉದ್ದೇಶವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರವು ಪ್ರತಿ ವೀಸಾ ನಿರ್ಧಾರವೂ ರಾಷ್ಟ್ರೀಯ ಭದ್ರತೆಯ ಜೊತೆಗೆ ತಳಕು ಹಾಕಿಕೊಂಡಿರುವ ಕಾರಣದಿಂದ ಪರಿಶೀಲನೆಯಲ್ಲಿ ಬಿಗಿ ಮಾಡಬೇಕು ಎಂದು ತಿಳಿಸಿದೆ. “ಅಮೆರಿಕದ ವೀಸಾವು ಸೌಲಭ್ಯವೇ ವಿನಾ ಹಕ್ಕಲ್ಲ” ಎಂದು ಅಮೆರಿಕದ ರಾಯಭಾರ ಕಚೇರಿ ಪದೇಪದೆ ಹೇಳಿದೆ.
►ಭಾರತೀಯರಿಗೆ H-1B ಏಕೆ ಮುಖ್ಯ?
H-1B ವೀಸಾವನ್ನು ಅಮೆರಿಕದ ತಂತ್ರಜ್ಞಾನ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಕಾಮರ್ಮೀ ಕಾರ್ಮಿಕರನ್ನು ನೇಮಿಸಿಕೊಳ್ಳಲು ವ್ಯಾಪಕವಾಗಿ ಬಳಸಲಾಗುತ್ತದೆ. ಭಾರತೀಯ ವೃತ್ತಿಪರರರು H-1B ವೀಸಾ ಹೊಂದಿರುವವರಲ್ಲಿ ಅತಿ ದೊಡ್ಡ ಪಾಲು ಹೊಂದಿದ್ದಾರೆ. ಪರಿಶೀಲನೆಯ ಅವಧಿ ವಿಸ್ತರಣೆಯಾಗುತ್ತಿರುವುದು ಪ್ರಯಾಣದ ಯೋಜನೆಯಲ್ಲಿ ತಡವಾಗುವ ಆತಂಕ ಬೆಳೆದಿದೆ.