×
Ad

ಆಪರೇಷನ್ ಸಿಂಧೂರ್ ಸಂದರ್ಭ ದೇವರು ಪಾಕಿಸ್ತಾನವನ್ನು ರಕ್ಷಿಸಿದ್ದಾರೆ: ಪಾಕ್‌ ಸೇನಾ ಮುಖ್ಯಸ್ಥ ಮುನೀರ್

Update: 2025-12-22 22:56 IST

 ಪಾಕ್‌ ಸೇನಾ ಮುಖ್ಯಸ್ಥ ಮುನೀರ್ | Photo Credit : NDTV  

ಇಸ್ಲಮಾಬಾದ್, ಡಿ.22: ಈ ವರ್ಷದ ಆರಂಭದಲ್ಲಿ ಭಾರತದೊಂದಿಗಿನ ಮಿಲಿಟರಿ ಸಂಘರ್ಷದ ಸಂದರ್ಭ ದೇವರು ಪಾಕಿಸ್ತಾನಕ್ಕೆ ಸಹಾಯ ಮಾಡಿದ್ದಾರೆ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಹೇಳಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಮೇ ತಿಂಗಳಿನಲ್ಲಿ ಉಭಯ ದೇಶಗಳ ನಡುವೆ ನಡೆದಿದ್ದ ಮಿಲಿಟರಿ ಸಂಘರ್ಷದ ಬಗ್ಗೆ ಸಾರ್ವಜನಿಕ ಸಭೆಯೊಂದರಲ್ಲಿ ಉಲ್ಲೇಖಿಸಿದ ಆಸಿಮ್ ಮುನೀರ್ `ಒಂದು ವೇಳೆ ಅಲ್ಲಾಹ್‌ ನಿಮಗೆ ಸಹಾಯ ಮಾಡಿದರೆ, ಯಾರೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ಆಪರೇಷನ್ ಸಿಂಧೂರ್ ಸಂದರ್ಭ ಪಾಕಿಸ್ತಾನಕ್ಕೆ ದೇವರ ಬೆಂಬಲವಿತ್ತು' ಎಂದು ಹೇಳಿರುವ ವೀಡಿಯೊ ಇದೀಗ ವೈರಲ್ ಆಗಿದೆ. ಡಿಸೆಂಬರ್ 10ರಂದು ಆಸಿಮ್ ಮುನೀರ್ ಈ ಹೇಳಿಕೆ ನೀಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News