ಗಾಝಾ ಅಂತಾರಾಷ್ಟ್ರೀಯ ಪಡೆಗೆ 3,500 ಯೋಧರನ್ನು ಕಳುಹಿಸಲು ಪಾಕ್ ಯೋಜನೆ: ವರದಿ
Update: 2025-12-22 20:40 IST
Photo Credit : AP \ PTI
ಇಸ್ಲಮಾಬಾದ್, ಡಿ.22: ಗಾಝಾ ಶಾಂತಿ ಯೋಜನೆಯ ಭಾಗವಾಗಿ ಪ್ರಸ್ತಾವಿತ ಅಂತಾರಾಷ್ಟ್ರೀಯ ಸ್ಥಿರೀಕರಣ ಪಡೆಗೆ ಸುಮಾರು 3,500 ಯೋಧರನ್ನು ಕಳುಹಿಸಲು ಪಾಕಿಸ್ತಾನ ಯೋಜಿಸಿದೆ ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಪಾಕಿಸ್ತಾನವು ಅಧಿಕೃತವಾಗಿ ಅಂತಿಮ ನಿರ್ಧಾರವನ್ನು ದೃಢಪಡಿಸಿಲ್ಲ. ಆದರೆ ಸಂಭಾವ್ಯ ನಿಯೋಜನೆಯ ಕುರಿತು ಪಾಕಿಸ್ತಾನದ ಮಿಲಿಟರಿ ನಾಯಕತ್ವವು ಅಮೆರಿಕಾದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವುದಾಗಿ ತಿಳಿದುಬಂದಿದೆ. ಪಾಕಿಸ್ತಾನಿ ಪಡೆಗಳ ಭಾಗವಹಿಸುವಿಕೆಯು ಪಶ್ಚಿಮ ಏಶ್ಯಾದಲ್ಲಿ ಅಂತಾರಾಷ್ಟ್ರೀಯ ಶಾಂತಿ ಕಾರ್ಯಾಚರಣೆಯಲ್ಲಿ ದೇಶಕ್ಕೆ ಅಪರೂಪದ ನೇರ ಪಾತ್ರವನ್ನು ಗುರುತಿಸುತ್ತದೆ ಮತ್ತು ಅಮೆರಿಕಾದೊಂದಿಗಿನ ಸಂಬಂಧಗಳನ್ನು ಬಲಪಡಿಸಲಿದೆ. ಆದರೆ ಸ್ಥಳೀಯವಾಗಿ ವ್ಯಾಪಕ ಪ್ರತಿರೋಧವನ್ನೂ ಎದುರಿಸಬೇಕಾಗಬಹುದು ಎಂದು `ಡಾನ್' ಪತ್ರಿಕೆ ವರದಿ ಮಾಡಿದೆ.