ಕೋವಿಡ್‍ನಿಂದ ಮೃತಪಟ್ಟ ಶೇ 26 ರಷ್ಟು ವೈದ್ಯರಿಗೆ ಮಾತ್ರ ಪರಿಹಾರವೊದಗಿಸಿದ ಸರ್ಕಾರ: RTI ಉತ್ತರದಿಂದ ಬಹಿರಂಗ

Update: 2022-10-31 11:54 GMT

ಹೊಸದಿಲ್ಲಿ: ಕೋವಿಡ್ ಮೊದಲನೇ ಮತ್ತು ಎರಡೂ ಅಲೆಗಳ ವೇಳೆ ಕೋವಿಡ್ ನಿಂದ ಮೃತಪಟ್ಟ ಕೇವಲ 423 ರಷ್ಟು ವೈದ್ಯರ ಕುಟುಂಬಗಳಿಗೆ ಮಾತ್ರ ಸರಕಾರ ಈ ವರ್ಷದ ಸೆಪ್ಟೆಂಬರ್ 30 ರವರೆಗೆ ಪರಿಹಾರ ಒದಗಿಸಿದೆ ಎಂದು ಆರ್‍ಟಿಐ ಉತ್ತರವೊಂದು ತಿಳಿಸಿದೆ. ಈ ಎರಡೂ ಅಲೆಗಳ ಸಂದರ್ಭ 1500 ಕ್ಕೂ ಅಧಿಕ ವೈದ್ಯರು ಸೋಂಕಿಗೆ ತುತ್ತಾಗಿ ಬಲಿಯಾಗಿದ್ದಾರೆ ಎಮದು ಭಾರತೀಯ ವೈದ್ಯಕೀಯ ಸಂಘ ಹೇಳಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಕೋವಿಡ್ ಸೋಂಕಿನಿಂದ ಮೃತಪಟ್ಟವರನ್ನು ಅವರ ವೃತ್ತಿಯ ಆಧಾರದಲ್ಲಿ ವರ್ಗೀಕರಿಸಿದ ಅಂಕಿಅಂಶವಿಲ್ಲವೆಂದು ಕೇಂದ್ರ ಆರೋಗ್ಯ ಸಚಿವಾಲಯ ಜುಲೈ ತಿಂಗಳಿನಲ್ಲಿ ಸಂಸತ್ತಿಗೆ ತಿಳಿಸಿತ್ತು.

ಮೃತಪಟ್ಟ 428 ವೈದ್ಯರ ಕುಟುಂಬಗಳಿಗೆ ಮಾರ್ಚ್ 30, 2020 ಹಾಗೂ ಸೆಪ್ಟೆಂಬರ್ 30, 2022 ರ ನಡುವೆ  ರೂ 214 ಕೋಟಿ ಪರಿಹಾರವನ್ನು ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಅಡಿ ಒದಗಿಸಲಾಗಿದೆ ಎಂದು ಆರ್‍ಟಿಐ ಉತ್ತರವೊಂದು ತಿಳಿಸಿದೆ.

ಐಎಂಎ ಪ್ರಕಾರ 1596 ಗೂ  ಅಧಿಕ ವೈದ್ಯರು ಕೋವಿಡ್‍ನಿಂದ ಮೃತಪಟ್ಟಿದ್ದರು. ಆರ್‍ಟಿಐ ಅರ್ಜಿಯನ್ನು ಕಣ್ಣೂರು ಮೂಲದ ನೇತ್ರ ತಜ್ಞ ಡಾ ವಿ ಕೆ ಬಾಬು ಸಲ್ಲಿಸಿದ್ದರು. ಸರಕಾರ ಶೇ 26.8ರಷ್ಟು ಮೃತ ವೈದ್ಯರ ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಿದೆ ಎಂದು ಆರ್‍ಟಿಐ ಉತ್ತರದಿಂದ ತಿಳಿದು ಬರುತ್ತದೆ ಎಂದು ಅವರು ಹೇಳಿದ್ದಾರೆ.

Similar News