×
Ad

​ಏಕತೆಗಾಗಿ ಓಟ: ಉಡುಪಿ ಜಿಲ್ಲಾ ಮಟ್ಟದ ಕ್ರಾಸ್‌ಕಂಟ್ರಿ ರೇಸ್

Update: 2022-10-31 22:31 IST

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇವರ ಸಂಯುಕ್ತ ಆಶ್ರಯದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್‌ರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಉಡುಪಿಯಲ್ಲಿ ಸೋಮವಾರ ‘ಏಕತೆಗಾಗಿ ಓಟ’ ಘೋಷ ವಾಕ್ಯ ದಡಿ ನಡೆದ ಜಿಲ್ಲಾ ಮಟ್ಟದ ಕ್ರಾಸ್ ಕಂಟ್ರಿ ಓಟಕ್ಕೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಬಳಿ ಜಂಟಿಯಾಗಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆಂಪರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಒಟ್ಟು 3 ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಜಿಲ್ಲೆಯಾ ದ್ಯಂತದಿಂದ ಆಗಮಿಸಿದ ಸುಮಾರು 300ಕ್ಕೂ ಅಧಿಕ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಉಪಸ್ಥಿತರಿದ್ದು ವಿಜೇತರಾದ ಮೊದಲ ಆರು ಸ್ಫರ್ಧಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಉಪಸ್ಥಿತರಿದ್ದರು.

ಫಲಿತಾಂಶಗಳು: ಪುರುಷರ ವಿಭಾಗ
10ಕಿ.ಮೀ. ಕ್ರಾಸ್‌ಕಂಟ್ರಿ ರೇಸ್: 1.ಸಚಿನ್, ಆನಂದತೀರ್ಥ ವಿದ್ಯಾಲಯ ಕುಂಜಾರುಗಿರಿ, 2.ಗಂಗಪ್ಪ,ಉಡುಪಿ, 3.ದಿನೇಶ್, ಉಡುಪಿ 4.ಮಂಜುನಾಥ, ಎಸ್‌ಎಂಎಸ್ ಬ್ರಹ್ಮಾವರ, 5.ಈಶ್ವರ್, ಕೋಟಿ ಚೆನ್ನಯ ತರಬೇತಿ ಕೇಂದ್ರ ಬಾರಕೂರು, 6.ಮಾಣಿಕ್ಯ ಶೆಟ್ಟಿ, ಕೋಟಿಚೆನ್ನಯ ತರಬೇತಿ ಕೇಂದ್ರ ಬಾರ್ಕೂರು.

20 ವರ್ಷದೊಳಗಿನ ಯುವಕರ ವಿಭಾಗ (7ಕಿ.ಮೀ.): 1.ಮಾಲಪ್ಪ, ಆನಂದ ತೀರ್ಥ ವಿದ್ಯಾಲಯ ಕುಂಜಾರುಗಿರಿ, 2.ದರ್ಶನ್, ಡಿವೈಇಎಸ್ ಉಡುಪಿ, 3.ಬಸವರಾಜ್, ತೆಂಕನಿಡಿಯೂರು, 4.ಸಾತ್ವಿಕ್, ಎಂಜಿಎಂ ಉಡುಪಿ, 5.ಅಭಿಷೇಕ್, ಕೋಟಿ ಚೆನ್ನಯ ತರಬೇತಿ ಕೇಂದ್ರ ಬಾರಕೂರು, 6. ಗೋಪಾಲ್, ಕೋಟಿ ಚೆನ್ನಯ ಬಾರಕೂರು.

17 ವರ್ಷದೊಳಗಿನ ಬಾಲಕರು (7ಕಿ.ಮೀ.): 1.ವಿವೇಕಾನಂದ, ಆನಂದ ತೀರ್ಥ ವಿದ್ಯಾಲಯ ಕುಂಜಾರುಗಿರಿ, 2. ತನಿಷ್‌ಎಚ್., ಸೈಂಟ್ ಸಿಸಿಲಿ ಉಡುಪಿ, 3.ಪ್ರಜ್ವಲ್, ಶಾರದಾ ಹೈಸ್ಕೂಲ್ ಚೇರ್ಕಾಡಿ, 4.ಕೌಶಿಲ್ ಎಸ್. ಸಾಲಿಯಾನ್, ಸೈಂಟ್ ಮೇರಿಸ್ ಉಡುಪಿ, 5.ದಿಗಂತ್ ಎಸ್.ಎಸ್., ಲಿಟ್ಲ್‌ರಾಕ್ ಬ್ರಹ್ಮಾವರ, 6.ಪ್ರೀತಂ ಡಿಸೋಜ, ಶಾಂತಿನಿಕೇತನ, ಅಲೆವೂರು.
ಮಹಿಳೆಯರ ವಿಭಾಗ:

10ಕಿ.ಮೀ. ಕ್ರಾಸ್‌ಕಂಟ್ರಿ ರೇಸ್: 1.ಪ್ರತೀಕ್ಷ, ನಿಟ್ಟೆ ಸಂಸ್ಥೆ ನಿಟ್ಟೆ, 2.ಸೀಮಾ ಆರ್.ನಾಯ್ಕೆ, ಡಿವೈಇಎನ್ ಉಡುಪಿ, 3. ಅಂಜಲಿ ಎಂ.ಪಿ., ಡಿವೈಇಎಸ್ ಉಡುಪಿ, 4.ಲತಾ ಪಾಂಡುರಂಗ ನಾಯ್ಕೆ, ಡಿವೈಇಎಸ್ ಉಡುಪಿ, 5.ಕೆ. ಜಸ್ಮಿತಾ, ಡಿವೈಇಎಸ್ ಉಡುಪಿ, 6.ಪ್ರಿಯಾಂಕ ಬಿ., ನಿಟ್ಟೆ.

17 ವರ್ಷದೊಳಗಿನ ಬಾಲಕಿಯರು (7ಕಿ.ಮೀ.): 1.ನಂದಿನಿ ಜಿ., ಎನ್‌ಎಸ್‌ಎಎಂ ನಿಟ್ಟೆ, 2. ರಾಜಶ್ರೀ, ಶಾರದಾ ಹೈಸ್ಕೂಲ್ ಚೇರ್ಕಾಡಿ, 3.ಪ್ರೀತಿ ಜಿ., ಮೊರಾರ್ಜಿ ವಸತಿ ಶಾಲೆ, ಯೆಡ್ಯಾಡಿ ಕೋಟೇಶ್ವರ, 4.ಲಕ್ಷ್ಮೀ, ಆನಂದ ತೀರ್ಥ ವಿದ್ಯಾಲಯ ಕುಂಜಾರುಗಿರಿ, 5.ಕಾವೇರಿ, ಆನಂದ ತೀರ್ಥ ವಿದ್ಯಾಲಯ, ಕುಂಜಾರುಗಿರಿ, 6. ಸ್ವಾತಿ, ತೆಂಕನಿಡಿಯೂರು.

20ವರ್ಷದೊಳಗಿನ ಯುವತಿಯರ ವಿಭಾಗ (7ಕಿ.ಮೀ.): 1.ಸಾಕ್ಷಿ, ನಿಟ್ಟೆ, 2.ಪ್ರಿತೀಶ ಶೆಟ್ಟಿ, ಎಸ್‌ಟಿ ಉಡುಪಿ, 3.ಸುಪ್ರೀತಾ, ಡಾ.ಜಿ.ಶಂಕರ್ ಮಹಿಳಾ ಕಾಲೇಜು, ಅಜ್ಜರಕಾಡು ಉಡುಪಿ, 4.ರಿತೀಶ, ಎಸ್.ಪಿ., ಉಡುಪಿ, 5. ಸೋನಂ, ಎಸ್.ಪಿ.ಉಡುಪಿ, 6.ಶ್ವೇತಾ ಆರ್. ನಿಟ್ಟೆ.

Similar News