ಗುರುಗ್ರಾಮ:ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆ ವೇಳೆ ಉಸಿರುಗಟ್ಟಿ ಇಬ್ಬರ ಸಾವು
ಗುರುಗ್ರಾಮ (ಹರ್ಯಾಣ),ಅ.31: ಇಲ್ಲಿಗೆ ಸಮೀಪದ ಮುಹಮ್ಮದ್ಪುರ ಜಾಡಸಾ ಗ್ರಾಮ(Muhammadpur Jadasa village)ದ ಮನೆಯೊಂದರ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿದ್ದು,ಈ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಮೃತರನ್ನು ಸ್ವಚ್ಛತಾ ಕಾರ್ಮಿಕ ದಿಲೀಪ (Dileep)ಮತ್ತು ಸ್ಥಳೀಯ ಟೈಲರ್ ಶಹಾಬುದ್ದೀನ್ (Tyler Shahabuddin)ಎಂದು ಗುರುತಿಸಲಾಗಿದೆ.ಭೀಮ್(Bheem) ಎಂಬಾತ ರವಿವಾರ ಸಂಜೆ ಸೆಪ್ಟಿಕ್ ಟ್ಯಾಂಕ್(Septic tank) ಸ್ವಚ್ಛಗೊಳಿಸಲು ತನ್ನ ತಂದೆ ಮತ್ತು ಶಹಾಬುದ್ದೀನ್ರನ್ನು ತನ್ನ ಮನೆಗೆ ಕರೆದೊಯ್ದಿದ್ದ. ತನ್ನ ತಂದೆ ಮತ್ತು ಶಹಾಬುದ್ದೀನ್ ಗುಂಡಿಯಲ್ಲಿ ಇಳಿದಿದ್ದು,ಭೀಮ್ ಹೊರಗಡೆ ನಿಂತಿದ್ದ. ಗುಂಡಿಯಲ್ಲಿನ ವಿಷಕಾರಿ ಅನಿಲವನ್ನು ಸೇವಿಸಿ ತನ್ನ ತಂದೆ ಮತ್ತು ಶಹಾಬುದ್ದೀನ್ ಮೃತಪಟ್ಟಿದ್ದಾರೆ. ಅವರಿಗೆ ಯಾವುದೇ ಸುರಕ್ಷತಾ ಉಪಕರಣಗಳನ್ನು ಒದಗಿಸಿರಲಿಲ್ಲ ಎಂದು ದಿಲೀಪರ ಪುತ್ರ ಸೋರವ್ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾನೆ.
ಮೃತವ್ಯಕ್ತಿಗಳು ಯಾವುದೇ ಸುರಕ್ಷತಾ ಉಪಕರಣವಿಲ್ಲದೆ ಟ್ಯಾಂಕ್ನಲ್ಲಿ ಇಳಿದಿದ್ದರು ಎನ್ನುವುದನ್ನು ಪೊಲೀಸರೂ ದೃಢಪಡಿಸಿದ್ದಾರೆ.
ಆರೋಪಿ ಭೀಮ್ ತಲೆಮರೆಸಿಕೊಂಡಿದ್ದು,ಆತನಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.