ವಾಯು ಮಾಲಿನ್ಯದಂತಹ ಬೃಹತ್ ಸಮಸ್ಯೆ ನಿವಾರಿಸಿಕೊಳ್ಳಲು ಸರಕಾರ ಗಂಭೀರವಾಗಿಲ್ಲ: ವರುಣ್ ಗಾಂಧಿ

ಉಸಿರಾಟ, ಶ್ವಾಸಕೋಶದ ಸಮಸ್ಯೆ ಇರುವ ರೋಗಿಗಳಿಂದ ಆಸ್ಪತ್ರೆಗಳು ತುಂಬಿ ಹೋಗಿವೆ ಎಂದ ಬಿಜೆಪಿ ಸಂಸದ

Update: 2022-11-03 10:15 GMT

ಹೊಸದಿಲ್ಲಿ: ದಿಲ್ಲಿ-ಎನ್‌ಸಿಟಿಯಲ್ಲಿ ಗಾಳಿಯ ಗುಣಮಟ್ಟ ಹದಗೆಡುತ್ತಿರುವಾಗ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಅನೇಕ ಸರಕಾರಿ ಏಜೆನ್ಸಿಗಳ ನಡುವೆ "ಕಾಳಜಿ ಹಾಗೂ  ಸಮನ್ವಯ" ಕೊರತೆಯನ್ನು ಬಿಜೆಪಿ ಸಂಸದ ವರುಣ್ ಗಾಂಧಿ (BJP MP Varun Gandhi) ಅವರು ಇಂದು ಪ್ರಶ್ನಿಸಿದ್ದಾರೆ.

"ಈ ದೈತ್ಯಾಕಾರದ ಸಮಸ್ಯೆಯ ಬಗ್ಗೆ ಸರಕಾರ ಅಥವಾ ಜನರು ಗಂಭೀರವಾಗಿಲ್ಲ.  ಉಸಿರಾಟ, ಹೃದಯ ಮತ್ತು ಶ್ವಾಸಕೋಶದ ಸಮಸ್ಯೆ ಇರುವ ರೋಗಿಗಳಿಂದ ಆಸ್ಪತ್ರೆಗಳು ತುಂಬಿ ಹೋಗಿವೆ'' ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.

"ದಿಲ್ಲಿ-ಎನ್‌ಸಿಆರ್‌ನಲ್ಲಿ 10 ಮಕ್ಕಳಲ್ಲಿ ಎಂಟು ಮಕ್ಕಳಿಗೆ ಉಸಿರಾಟದ ತೊಂದರೆಗಳಿವೆ. ವರ್ಷಗಳ ಚರ್ಚೆಗಳ ನಂತರ, ಅನೇಕ ಸರಕಾರಿ ಘಟಕಗಳ ನಡುವೆ ಕಾಳಜಿ/ಸಮನ್ವಯತೆಯ ನಿರಂತರ ಕೊರತೆ ಏಕೆ ಇದೆ?. 46 ಮಿಲಿಯನ್ ಜನರಿಗೆ ಜೀವಮಾನದ ಉಸಿರಾಟದ ಆರೈಕೆಗಿಂತ ಸಮಸ್ಯೆಯನ್ನು ಪರಿಹರಿಸುವ ವೆಚ್ಚವು ಹೆಚ್ಚಿದೆಯೇ? ಎಂದು ವರುಣ್ ಗಾಂಧಿ ಪ್ರಶ್ನಿಸಿದ್ದಾರೆ.

ಗಾಳಿಯ ಗುಣಮಟ್ಟ ಕ್ಷೀಣಿಸುತ್ತಿರುವುದರಿಂದ ಬಿಜೆಪಿ ಹಾಗೂ  ದಿಲ್ಲಿ ಹಾಗೂ ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಾರ್ಟಿ ಪರಸ್ಪರ ದೂಷಿಸಿಕೊಳ್ಳುತ್ತಿವೆ.

Similar News