ಖರಗಪುರ ಐಐಟಿ ವಿದ್ಯಾರ್ಥಿ ಸಾವು:‘ಕೇಸ್ ಡೈರಿ’ಸಲ್ಲಿಸಲು ಪೊಲೀಸರಿಗೆ ಕೋಲ್ಕತಾ ಹೈಕೋರ್ಟ್ ನಿರ್ದೇಶನ

Update: 2022-11-03 17:01 GMT

ಕೋಲ್ಕತಾ,ನ.3: ಐಐಟಿ-ಖರಗಪುರ(IIT-Kharagpur)ದ ಮೂರನೇ ವರ್ಷದ ವಿದ್ಯಾರ್ಥಿಯ ಸಾವಿನ ತನಿಖೆಯ ಕುರಿತು ವರದಿಯನ್ನು ಸಲ್ಲಿಸುವಂತೆ ಕೋಲ್ಕತಾ ಉಚ್ಚ ನ್ಯಾಯಾಲಯವು ಗುರುವಾರ ಪೊಲೀಸರಿಗೆ ನಿರ್ದೇಶನ ನೀಡಿದೆ. ಅಸ್ಸಾಂ ಮೂಲದ ವಿದ್ಯಾರ್ಥಿ ಫೈಝಾನ್ ಅಹ್ಮದ್(Faizan Ahmed) ಮೃತದೇಹವು ಅ.14ರಂದು ಆತನ ಹಾಸ್ಟೆಲ್ ಕೊಠಡಿಯಲ್ಲಿ ಪತ್ತೆಯಾಗಿತ್ತು.

ಮುಂದಿನ ವಿಚಾರಣಾ ದಿನಾಂಕವಾದ ನ.10ರಂದು ಕೇಸ್ ಡೈರಿಯನ್ನು ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ ನ್ಯಾ.ರಾಜಶೇಖರ ಮಂಥಾ(Dr. Rajasekhara Mantha) ಅವರು,ಅಂದು ನ್ಯಾಯಾಲಯದಲ್ಲಿ ಹಾಜರಿರುವಂತೆ ಪ್ರಕರಣದ ತನಿಖಾಧಿಕಾರಿಗೆ ಆದೇಶಿಸಿದರು.

ತನ್ನ ಮಗನ ಸಾವಿನ ಕುರಿತು ವಿಶೇಷ ತನಿಖಾ ತಂಡದಿಂದ ತನಿಖೆಗಾಗಿ ಫೈಝಾನ್ ತಂದೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.

ಪ್ರಕರಣದಲ್ಲಿಯ ತನಿಖೆಯ ಕುರಿತು ವರದಿಯನ್ನು ಸಲ್ಲಿಸುವಂತೆ ಮತ್ತು ತನಿಖೆಯ ಮೇಲ್ವಿಚಾರಣೆಗಾಗಿ ಹಿರಿಯ ಪೊಲೀಸ್ ಅಧಿಕಾರಿಯೋರ್ವರನ್ನು ನಿಯೋಜಿಸುವಂತೆ ಉಚ್ಚ ನ್ಯಾಯಾಲಯವು ಪಶ್ಚಿಮ ಮೇದಿನಿಪುರ ಎಸ್ಪಿಗೆ ಆದೇಶಿಸಿತು.

ಮೃತ ವಿದ್ಯಾರ್ಥಿಯ ಸಂರಕ್ಷಿಸಿಡಲಾಗಿರುವ ಶರೀರದ ಸ್ಯಾಂಪಲ್ಗಳ ವಿಸೆರಾ ಪರೀಕ್ಷೆಗೂ ನ್ಯಾಯಾಲಯವು ಆದೇಶಿಸಿತು.

Similar News