×
Ad

ಎಬಿಡಿ ವಿಲಿಯರ್ಸ್‌ ಭೇಟಿಯಾದ ರಿಷಬ್‌ ಶೆಟ್ಟಿ: 'ಕಾಂತಾರ' ಶ್ಲಾಘಿಸಿದ ರಾಯಲ್‌ ಚ್ಯಾಲೆಂಜರ್ಸ್‌ ಸ್ಟಾರ್‌

Update: 2022-11-04 19:03 IST

ಬೆಂಗಳೂರು: 'ಕಾಂತಾರ' (Kantara) ಸಿನೆಮಾ ಯಶಸ್ಸಿನ ಉತ್ತುಂಗ ತಲುಪುತ್ತಿದ್ದಂತೆಯೇ ವ್ಯಾಪಕ ಜನಪ್ರಿಯತೆ ಪಡೆದಿರುವ ಅದರ ನಾಯಕ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ರಾಯಲ್‌ ಚ್ಯಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರ, ಸೌತ್‌ ಆಪ್ರಿಕಾ ಕ್ರಿಕೆಟಿಗ ಎ ಬಿ ಡಿ ವಿಲಿಯರ್ಸ್‌ (AB de Villiers) ಅವರನ್ನು ಭೇಟಿಯಾಗಿದ್ಧಾರೆ. ಈ ಸಂದರ್ಭ ಎ ಬಿ ಡಿ ವಿಲಿಯರ್ಸ್‌ ಅವರು 'ಕಾಂತಾರ' ಸಿನೆಮಾವನ್ನು ಶ್ಲಾಘಿಸಿದ್ದಾರೆ ಎಂದು indiatoday.in ವರದಿ ಮಾಡಿದೆ

ಈ ಕುರಿತು ರಿಷಬ್‌ ಶೆಟ್ಟಿ ಇನ್‌ಸ್ಟಾಗ್ರಾಂ ವೀಡಿಯೋ ಒಂದನ್ನು ಶೇರ್‌ ಮಾಡಿದ್ದಾರೆ. ಅದರಲ್ಲಿ ಅವರು ಹಾಗೂ ಡಿ ವಿಲಿಯರ್ಸ್‌ ಜೊತೆಯಾಗಿರುವುದು ಕಾಣಿಸುತ್ತದೆ. ʻʻಇದೊಂದು ಮ್ಯಾಚ್‌, ಇಂದು ನಿಜವಾದ 360 ಅನ್ನು ಭೇಟಿಯಾದೆ. ಸೂಪರ್‌ ಹೀರೋ ಮರಳಿ ನಮ್ಮ ಬೆಂಗಳೂರಿಗೆ ಬಂದಿದ್ದಾರೆ,ʼʼ  ಎಂದು ರಿಷಬ್‌ ಶೆಟ್ಟಿ ತಮ್ಮ ಇನ್‌ಸ್ಟಾ ಪೋಸ್ಟ್‌ನಲ್ಲಿ ಬರೆದಿದ್ದಾರೆ.

Similar News