ಉಮೇಶ್ ರೆಡ್ಡಿ ಗಲ್ಲು ಶಿಕ್ಷೆ ರದ್ದುಪಡಿಸಿದ ಸುಪ್ರೀಂಕೋರ್ಟ್
ಹೊಸದಿಲ್ಲಿ: ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಉಮೇಶ್ ರೆಡ್ಡಿ (Umesh Reddy) ಗಲ್ಲು ಶಿಕ್ಷೆಯನ್ನು (Death Sentence) ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ರದ್ದುಪಡಿಸಿದೆ ಎಂದು livelaw ವರದಿ ಮಾಡಿದೆ.
ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದ ಬಳಿಕ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯವು 2006 ರಲ್ಲಿ ಉಮೇಶ್ ರೆಡ್ಡಿ ಮರಣದಂಡನೆ ವಿಧಿಸಿತ್ತು. ನಂತರ, ಸುಪ್ರೀಂ ಕೋರ್ಟ್ 2011 ರಲ್ಲಿ ಆತನಿಗೆ ನೀಡಲಾದ ಮರಣದಂಡನೆಯನ್ನು ಎತ್ತಿಹಿಡಿದಿತ್ತು. ಅಲ್ಲದೆ, ಆತನ ಕ್ಷಮಾದಾನ ಅರ್ಜಿಯನ್ನು ಭಾರತದ ರಾಷ್ಟ್ರಪತಿ ತಿರಸ್ಕರಿಸಿದ್ದರು. ಬಳಿಕ ಅದನ್ನು ಪ್ರಶ್ನಿಸಿ ಆತ ಕರ್ನಾಟಕ ಹೈಕೋರ್ಟ್‌ಗೆ ಮೊರೆ ಹೋಗಿದ್ದ. ಆತ ಸಲ್ಲಿಸಿದ್ದ ರಿಟ್ ಅರ್ಜಿಯೂ ವಜಾಗೊಂಡಿದ್ದರಿಂದ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ.
ಸುನಿಲ್ ಬಾತ್ರಾ vs ದಿಲ್ಲಿ ಅಡ್ಮಿನಿಸ್ಟ್ರೇಷನ್ (1978) 4 SCC 494 ರಲ್ಲಿನ ತೀರ್ಪನ್ನು ಉಲ್ಲಂಘಿಸಿ 2006 ರಿಂದ 2016 ರವರೆಗೆ ರೆಡ್ಡಿಯನ್ನು "ಅಂಧೇರಿ ಬ್ಲಾಕ್" ನಲ್ಲಿ ಏಕಾಂತ ಬಂಧನದಲ್ಲಿ ಇರಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಮುಂದೆ ರೆಡ್ಡಿ ಪರ ವಕೀಲರು ವಾದಿಸಿದ್ದರು. ವಾದವನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಮರಣದಂಡನೆಯನ್ನು ರದ್ದುಪಡಿಸಿದೆ ಎಂದು livelaw ವರದಿ ಮಾಡಿದೆ.
ಇದನ್ನೂ ಓದಿ: ಜೈಲಿನಲ್ಲಿ ಸೊಳ್ಳೆ ಕಾಟ: ಕೊಂದ ಸೊಳ್ಳೆಗಳನ್ನು ಬಾಟಲಿಯಲ್ಲಿ ನ್ಯಾಯಾಲಯಕ್ಕೆ ತಂದ ಗ್ಯಾಂಗ್‌ಸ್ಟರ್!