21 ದಿನದ ಮಗುವಿನ ಹೊಟ್ಟೆಯಲ್ಲಿ 8 ಭ್ರೂಣಗಳು ಪತ್ತೆ !

Update: 2022-11-04 17:43 GMT

ರಾಂಚಿ, ನ. 4: ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ 21 ದಿನದ ಮಗುವಿನ ಶಸ್ತ್ರಚಿಕಿತ್ಸೆ ಸಂದರ್ಭ ಹೊಟ್ಟೆಯಲ್ಲಿ 8 ಭ್ರೂಣಗಳು ಪತ್ತೆಯಾಗಿವೆ. 

ಈ ಭ್ರೂಣಗಳ ಗಾತ್ರ 3 ಸೆಂಟಿ ಮೀಟರ್‌ನಿಂದ 5 ಸೆಂಟಿ ಮೀಟರ್ ವರೆಗೆ ಇತ್ತು. ಅವು ಹೊಟ್ಟೆಯ ಚೀಲದಲ್ಲಿ ಅಡಗಿತ್ತು ಎಂದು ಶಸ್ತ್ರಚಿಕಿತ್ಸೆ ನಡೆಸಿದ ಡಾ. ಮುಹಮ್ಮದ್ ಇಮ್ರಾನ್ ಅವರು ಹೇಳಿದ್ದಾರೆ. 

ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಎಫ್‌ಐಎಫ್ ಎಂದು ಕರೆಯಲಾಗುತ್ತದೆ. ಎಫ್‌ಐಎಫ್ ಪ್ರಕರಣಗಳು ತುಂಬಾ ಅಪರೂಪ. 8 ಭ್ರೂಣಗಳು ಪತ್ತೆಯಾಗಿರುವ ಪ್ರಕರಣ ಇದುವರೆಗೆ ಎಲ್ಲಿಯೂ ವರದಿಯಾಗಿಲ್ಲ ಎಂದು ಇಮ್ರಾನ್ ಅವರು ತಿಳಿಸಿದ್ದಾರೆ.

Similar News