ಹಿಂದಿಯನ್ನು ಜಮ್ಮುಕಾಶ್ಮೀರ, ಲಡಾಖ್‌ನ ಅಧಿಕೃತ ಭಾಷೆಯನ್ನಾಗಿ ಮಾಡುವಂತೆ ಕೋರಿದ ಅರ್ಜಿ ತಿರಸ್ಕೃತ

Update: 2022-11-04 18:13 GMT

ಶ್ರೀನಗರ, ನ. 4: ಕೇಂದ್ರಡಾಳಿತ ಪ್ರದೇಶಗಳಾದ ಜಮ್ಮು ಹಾಗೂ ಕಾಶ್ಮೀರ, ಲಡಾಖ್‌ನಲ್ಲಿ  ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವಂತೆ ಕೋರಿದ ಮನವಿಯನ್ನು ಜಮ್ಮು ಹಾಗೂ ಕಾಶ್ಮೀರ, ಲಡಾಖ್ ಉಚ್ಚ ನ್ಯಾಯಾಲಯ ಕಳೆದ ವಾರ ತಿರಸ್ಕರಿಸಿದೆ. 

ಮುಖ್ಯ ನ್ಯಾಯಮೂರ್ತಿ ಮುಹಮ್ಮದ್ ಮಾಗ್ರೆ ಹಾಗೂ ನ್ಯಾಯಮೂರ್ತಿ ವಿನೋದ್ ಚಟರ್ಜಿ ಕೌಲ್ ಅವರನ್ನು ಒಳಗೊಂಡ ಪೀಠ ಇದು ಅಧಿಕೃತ ಭಾಷೆಗಳ ನಿಯೋಜಿತ ಕಾರ್ಯ ನಿರ್ವಹಣಾ ಅಧಿಕಾರಿಯ ಅಡಿಯಲ್ಲಿ ಬರುತ್ತದೆ ಎಂದು ಅಭಿಪ್ರಾಯಿಸಿತು. 
ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಹಾಗೂ ಕಾಶ್ಮೀರ, ಲಡಾಖ್‌ನಲ್ಲಿ ಸಂವಿಧಾನದ ಕಲಂ 343 ಹಾಗೂ 251ರ ಅಡಿಯಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಪರಿಗಣಿಸುವಂತೆ ಅರ್ಜಿದಾರ ಜಗದೇವ್ ಸಿಂಗ್ ಅವರು ಕೋರಿದ್ದರು. 

ಜಮ್ಮು ಹಾಗೂ ಕಾಶ್ಮೀರ ರಾಜ್ಯವನ್ನು ವಿಭಜನೆಗೆ ಅವಕಾಶ ನೀಡುವ ಕಲಂ 370 ಹಾಗೂ 35 ಎ ಯನ್ನು ಕೇಂದ್ರ ಸರಕಾರ 2019 ಆಗಸ್ಟ್ 5ರಂದು ರದ್ದುಗೊಳಿಸುವ ಮುನ್ನ ಜಮ್ಮು ಹಾಗೂ ಕಾಶ್ಮೀರ ರಾಜ್ಯದ  ಅಧಿಕೃತ ಭಾಷೆ ಉರ್ದು ಆಗಿತ್ತು. ಶಾಸಕಾಂಗ ಸಭೆ ರೂಪಿಸಿದ ಹಿಂದಿನ ರಾಜ್ಯದ ಅಧಿಕೃತ ದಾಖಲೆಗಳು ಉರ್ದು ಅಥವಾ ಹಿಂದಿಯಲ್ಲಿ ಇತ್ತು ಎಂದು ವರದಿ ಹೇಳಿದೆ. 

2020 ಸೆಪ್ಟಂಬರ್‌ನಲ್ಲಿ ಕೇಂದ್ರ ಸರಕಾರ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಹಾಗೂ ಕಾಶ್ಮೀರದಲ್ಲಿ ಅಧಿಕೃತ ಭಾಷೆಗಳ ಪಟ್ಟಿಯಲ್ಲಿ ಉರ್ದು ಹಾಗೂ ಇಂಗ್ಲೀಷ್‌ನೊಂದಿಗೆ ಕಾಶ್ಮೀರಿ, ಡೊಗ್ರಿ ಹಾಗೂ ಹಿಂದಿಯನ್ನು ಸೇರಿಸಲು ಅವಕಾಶ ನೀಡುವ ಜಮ್ಮು ಹಾಗೂ ಕಾಶ್ಮೀರ ಅಧಿಕೃತ ಭಾಷೆಗಳ ಕಾಯ್ದೆಯನ್ನು ಅಂಗೀಕರಿಸಿತ್ತು. 

Similar News