ಹಿಂದುತ್ವ ನಾಯಕನ ಹೇಳಿಕೆ ನಂತರ ಬಿಂದಿ ಧರಿಸದೆ ಫೋಟೋ ಪೋಸ್ಟ್‌ ಮಾಡುತ್ತಿರುವ ಮಹಾರಾಷ್ಟ್ರ ಪತ್ರಕರ್ತೆಯರು

Update: 2022-11-05 12:37 GMT

ಮುಂಬೈ: ಮುಂಬೈಯಲ್ಲಿ ಹಿಂದುತ್ವ ನಾಯಕ ಸಂಭಾಜಿ ಭಿಡೆ ಅವರು ಇತ್ತೀಚೆಗೆ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ ಪತ್ರಕರ್ತೆಯನ್ನುದ್ದೇಶಿಸಿ ಆಕೆ ಹಣೆಯಲ್ಲಿ ಬಿಂದಿ ಧರಿಸಿದರೆ ಮಾತ್ರ ಉತ್ತರ ನೀಡುವುದಾಗಿ ಹೇಳಿದ್ದನ್ನು ವಿರೋಧಿಸಿ ಮಹಾರಾಷ್ಟ್ರದ ಪತ್ರಕರ್ತೆಯರೆಲ್ಲ ಬಿಂದಿ ಧರಿಸದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ.

ಮರಾಠಿ ಸುದ್ದಿವಾಹಿನಿ ಸಾಮ್‌ ಟವಿಯ ಪತ್ರಕರ್ತೆ ರೂಪಾಲಿ ಬಿಬಿ ಅವರು ಬುಧವಾರ ಸಂಭಾಜಿ ಭಿಡೆ ಅವರಿಗೆ ಒಂದು ಪ್ರಶ್ನೆ ಕೇಳಿದಾಗ ಪ್ರತಿಕ್ರಿಯಿಸಿದ ಅವರು ʻʻಪ್ರತಿಯೊಬ್ಬ ಮಹಿಳೆ ಭಾರತ ಮಾತೆಯ ಅವತಾರ ಮತ್ತು ಭಾರತ ಮಾತೆ ವಿಧವೆಯಲ್ಲ. ಮೊದಲು ನೀವು ಬಿಂದಿ ಧರಿಸಿ, ನಂತರ ಮಾತನಾಡುತ್ತೇನೆ,ʼʼ ಎಂದು ಹೇಳಿದ್ದರು.

ಈ ಘಟನೆ ಬೆಳಕಿಗೆ ಬರುತ್ತಲೇ ಹಲವಾರು ಇತರ ಪತ್ರಕರ್ತೆಯರು ರೂಪಾಲಿ ಬೆಂಬಲಕ್ಕೆ ನಿಂತು ಬಿಂದಿ ಧರಿಸದೇ ಇರುವ ಚಿತ್ರಗಳನ್ನು ಪ್ರಕಟಿಸಿದ್ದಾರೆ.

ಅವಮಾನಿಸುವಂತಹ ಹೇಳಿಕೆ ನೀಡಿದ್ದನ್ನು ವಿರೋಧಿಸಿ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗ ಈಗಾಗಲೇ ಭಿಡೆ ಅವರಿಗೆ ನೋಟಿಸ್‌ ಜಾರಿಗೊಳಿಸಿದೆ.

Similar News