ರಿಯಾಯಿತಿ ದರದಲ್ಲಿ ‘ಗಂಧದಗುಡಿ’ ಚಿತ್ರ ಪ್ರದರ್ಶನ

Update: 2022-11-06 16:32 GMT

ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ನಟನೆಯ ಗಂಧದಗುಡಿ ಚಿತ್ರವನ್ನು ಇಂದಿನಿಂದ(ನ.6) ನ.10ರ ವರೆಗೆ ಚಿತ್ರಮಂದಿರಗಳಲ್ಲಿ 56 ರೂ.ಗಳಿಗೆ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ 112 ರೂ.ಗಳಿಗೆ ಪ್ರದರ್ಶನ ಮಾಡಲಾಗುತ್ತಿದೆ.

ಪುನೀತ್ ಅವರ ಆಶಯದಂತೆ ಸಿನೆಮಾವನ್ನು ಎಲ್ಲರೂ ನೋಡಬೇಕೆಂಬ ಉದ್ದೇಶದೊಂದಿಗೆ ಚಿತ್ರತಂಡದೊಂದಿಗೆ ಚರ್ಚಿಸಿ ಈ ದರ ರಿಯಾಯಿತಿ ನೀಡಲಾಗಿದೆ ಎಂದು ಅಶ್ವಿನಿ ಪುನೀತ್ ರಾಜ್‍ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Similar News