2022-23ರಲ್ಲಿ 60 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ರಫ್ತಿಗೆ ಕೇಂದ್ರ ಸರಕಾರ ಅನುಮತಿ

Update: 2022-11-06 18:07 GMT

ಹೊಸದಿಲ್ಲಿ, ನ. 6: ಕೋಟಾ ಆಧಾರದಲ್ಲಿ 2022-23ರ ಸಾಲಿನಲ್ಲಿ  60 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ರಫ್ತು ಮಾಡಲು ಕೇಂದ್ರ ಸರಕಾರ ಶನಿವಾರ ಅನುಮತಿ ನೀಡಿದೆ. 

ಅನಿಯಂತ್ರಿತ ಸಕ್ಕರೆ ರಫ್ತು ಹಾಗೂ ದೇಶದಲ್ಲಿ ಸಮರ್ಪಕ ಬೆಲೆಯಲ್ಲಿ ಬಳಕೆಗೆ ಅದರ ಲಭ್ಯತೆಯ ಖಾತರಿ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಹಾರ ಹಾಗೂ ಸಾರ್ವಜನಿಕ ವಿತರಣೆ ಇಲಾಖೆ ಹೇಳಿದೆ. 
ಬೆಲೆ ಏರಿಕೆ ನಿಯಂತ್ರಿಸಲು ಹಾಗೂ ದೇಶದ ಮಾರುಕಟ್ಟೆಯಲ್ಲಿ ಲಭ್ಯತೆ ಹೆಚ್ಚಿಸಲು ಸಕ್ಕರೆ ರಫ್ತಿನ ಮೇಲೆ ಕೇಂದ್ರ ಸರಕಾರ ಜೂನ್ 1ರಂದು ನಿರ್ಬಂಧ ವಿಧಿಸಿತ್ತು.  

ಕೇಂದ್ರ ಸರಕಾರದ ಶನಿವಾರದ ಈ ಅನುಮತಿಯಿಂದ ಸಕ್ಕರೆ ಕಾರ್ಖಾನೆಯ ಮಾಲಕರು ಸಕ್ಕರೆಯನ್ನು ತಾವೇ ಅಥವಾ ರಫ್ತುದಾರರು, ಸಂಸ್ಕರಣಾಗಾರಗಳ ಮೂಲಕ ರಫ್ತು ಮಾಡಬಹುದು. 

Similar News