ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ ಪ್ರಕರಣ: ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ಮೇಲೆ ಪೊಲೀಸರ ಲಾಠಿ ಪ್ರಹಾರ

Update: 2022-11-07 04:40 GMT

ಅಂಬೇಡ್ಕರ್ ನಗರ(ಉತ್ತರ ಪ್ರದೇಶ) : ಇತ್ತೀಚೆಗೆ  ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ಗುಂಪಿನ  ಮೇಲೆ ಉತ್ತರಪ್ರದೇಶದ ಪೊಲೀಸರು ಲಾಠಿ ಪ್ರಹಾರ ನಡೆಸಿ  ನಿಂದಿಸುತ್ತಿರುವ  ವೀಡಿಯೊವೊಂದು ವೈರಲ್ ಆಗಿದೆ.  ಪೊಲೀಸರ ಅತಿರೇಕದ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.

ಮಹಿಳೆಯರು ನಮ್ಮ ಮೇಲೆ ಹಾಗೂ ನಮ್ಮ  ವಾಹನಗಳ ಮೇಲೆ ಕಲ್ಲು ಎಸೆಯಲು ಆರಂಭಿಸಿದ ನಂತರ ನಾವು  "ಸಣ್ಣ ಬಲ" ಪ್ರಯೋಗವನ್ನು ಮಾಡಿದ್ದೇವೆ ಎಂದು ಪೊಲೀಸರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ..

ಇದೀಗ ವೈರಲ್ ಆಗಿರುವ ವೀಡಿಯೊ ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಜಲಾಲ್‌ಪುರದ್ದು. ಇತ್ತೀಚೆಗೆ ಈ ಪ್ರದೇಶದಲ್ಲಿ ಬಿ.ಆರ್.  ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ವಿರುದ್ಧ ಪೊಲೀಸರು ಲಾಠಿ ಪ್ರಯೋಗಿಸಿದ್ದಾರೆ. 

ರವಿವಾರ ಘಟನಾ ಸ್ಥಳದಲ್ಲಿ ಮಹಿಳೆಯರ ಗುಂಪು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಅವರನ್ನು ಚದುರಿಸಲು ಆಗಮಿಸಿದ್ದರು. ಪೊಲೀಸರ ಪ್ರಕಾರ, ಕೆಲವು ಪ್ರತಿಭಟನಾಕಾರರು ಹಿರಿಯ ಅಧಿಕಾರಿ ಸೇರಿದಂತೆ ಪೊಲೀಸರ ಮೇಲೆ ಕಲ್ಲು ಎಸೆಯಲು ಆರಂಭಿಸಿದರು.

"ಗೊಂದಲದ ಸಮಯದಲ್ಲಿ ಕೆಲವು ಪ್ರತಿಭಟನಾಕಾರರು ಪೊಲೀಸ್ ಕಾರಿನ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು "ಸಣ್ಣ ಬಲವನ್ನು" ಬಳಸಬೇಕಾಯಿತು " ಎಂದು ಅಂಬೇಡ್ಕರ್ ನಗರದ ಹಿರಿಯ ಪೊಲೀಸ್ ಅಧಿಕಾರಿ ಅಜಿತ್ ಕುಮಾರ್ ಸಿನ್ಹಾ ಹೇಳಿದ್ದಾರೆ.

Similar News