ಭಾರತದ ಶೇ. 90ಕ್ಕೂ ಅಧಿಕ ಸಿಬ್ಬಂದಿಯನ್ನು ವಜಾಗೊಳಿಸಿದ ಟ್ವಿಟರ್

Update: 2022-11-07 15:09 GMT

ಹೊಸದಿಲ್ಲಿ, ನ. 7: ಎಲಾನ್ ಮಸ್ಕ್(Elon Musk) ನೇತೃತ್ವದ ಟ್ವಿಟರ್(Twitter) ಭಾರತದಲ್ಲಿರುವ ತನ್ನ ಶೇ. 90 ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಎಂಜಿನಿಯರಿಂಗ್ ಹಾಗೂ ಉತ್ಪಾದನಾ ಸಿಬ್ಬಂದಿಯಲ್ಲಿ ಭಾರೀ ಕಡಿತವಾಗಿದೆ.

ಕಂಪೆನಿಯು ಭಾರತದಲ್ಲಿ ಕೇವಲ 200 ಉದ್ಯೋಗಿಗಳನ್ನು ಹೊಂದಿತ್ತು. ಉದ್ಯೋಗ ಕಡಿತದಿಂದ ಕೇವಲ ಸುಮಾರು 12 ಉದ್ಯೋಗಿಗಳು ಮಾತ್ರ  ಉಳಿದುಕೊಂಡಿದ್ದಾರೆ ಎಂದು ಈ ವಿಷಯದ ಕುರಿತು ತಿಳಿದಿರುವ ವ್ಯಕ್ತಿಯನ್ನು ಉಲ್ಲೇಖಿಸಿ ಬ್ಲೂಮ್ ಬರ್ಗ್ (Bloomberg)ವರದಿ ಮಾಡಿದೆ.

ಭಾರತದಲ್ಲಿ ಕಡಿತಗೊಂಡ ಉದ್ಯೋಗಗಳಲ್ಲಿ ಶೇ. 70 ಉತ್ಪಾದನಾ ಹಾಗೂ ಎಂಜಿನಿಯರಿಂಗ್ಗೆ ಕ್ಷೇತ್ರಕ್ಕೆ ಸಂಬಂಧಿಸಿದ್ದು ಎಂದು ವರದಿ ಹೇಳಿದೆ.

ಮಾರುಕಟ್ಟೆ, ಸಾರ್ವಜನಿಕ ನೀತಿ ಹಾಗೂ ಕಾರ್ಪೋರೇಟ್ ಸಂವಹನ ಸೇರಿದಂತೆ ಕಾರ್ಯಾಚರಣೆಯಾದ್ಯಂತ ಸ್ಥಾನಗಳನ್ನು ಕಡಿತಗೊಳಿಸಲಾಗಿದೆ ಎಂದು ಅದು ತಿಳಿಸಿದೆ.

ಎಲಾನ್ ಮಸ್ಕ್ ಅವರ ಟ್ವಿಟರ್ ಜಾಗತಿಕವಾಗಿ ಸರಿಸುಮಾರು ಅರ್ಧದಷ್ಟು ಅಥವಾ 3,700 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ.  

Similar News