ಟ್ವೆಂಟಿ-20 ವಿಶ್ವಕಪ್ ಮೊದಲ ಸೆಮಿ ಫೈನಲ್: ಪಾಕಿಸ್ತಾನಕ್ಕೆ 153 ರನ್ ಗುರಿ ನೀಡಿದ ನ್ಯೂಝಿಲ್ಯಾಂಡ್

Update: 2022-11-09 10:22 GMT

ಸಿಡ್ನಿ: ಟ್ವೆಂಟಿ-20 ವಿಶ್ವಕಪ್ ನ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡ ಪಾಕಿಸ್ತಾನದ ಗೆಲುವಿಗೆ 153 ರನ್ ಗುರಿ ನೀಡಿದೆ.

ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ನ್ಯೂಝಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಡರ್ಲ್ ಮಿಚೆಲ್ ಅರ್ಧಶತಕದ ನೆರವಿನಿಂದ ನ್ಯೂಝಿಲ್ಯಾಂಡ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು.

ಮೊದಲ ಓವರ್ ನ 3ನೇ ಎಸೆತದಲ್ಲಿ ಆರಂಭಿಕ ಬ್ಯಾಟರ್ ಫಿನ್ ಅಲೆನ್ ವಿಕೆಟನ್ನು ಕಳೆದುಕೊಂಡ ಕಿವೀಸ್ ತಂಡವನ್ನು ಡರ್ಲ್ ಮಿಚೆಲ್(ಔಟಾಗದೆ 53, 34 ಎಸೆತ, 3 ಬೌಂಡರಿ, 1 ಸಿಕ್ಸರ್) , ನಾಯಕ ವಿಲಿಯ್ಸಮನ್(46 ರನ್, 42 ಎಸೆತ, 1 ಬೌಂಡರಿ, 1 ಸಿಕ್ಸರ್) ಹಾಗೂ ನೀಶಾಮ್(ಔಟಾಗದೆ 16,12 ಎಸೆತ)  ಆಧರಿಸಿದರು.

ಪಾಕಿಸ್ತಾನದ ಪರ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ (2-24)ಯಶಸ್ವಿ ಬೌಲರ್ ಎನಿಸಿಕೊಂಡರು.

Similar News