ಮೇಲ್ಜಾತಿಗಳಿಗೆಮೀಸಲಾತಿ: ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಲು ಡಿಎಂಕೆ ನಿರ್ಧಾರ

Update: 2022-11-09 18:00 GMT

ಚೆನ್ನೈ, ನ. 9: ಆರ್ಥಿಕವಾಗಿ ಹಿಂದುಳಿದಿರುವಮೇಲ್ಜಾತಿಗಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಷೇತ್ರಗಳಲ್ಲಿ 10 ಶೇಕಡಮೀಸಲಾತಿ ನೀಡುವಕೇಂದ್ರ ಸರಕಾರದ ಯೋಜನೆಗೆ ಸುಪ್ರೀಂ ಕೋರ್ಟ್ ನೀಡಿರುವ ಅನುಮೋದನೆಯ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಲು ದ್ರಾವಿಡಮುನ್ನೇತ್ರಕಳಗಮ್ (ಡಿಎಮ್‌ಕೆ) ಪಕ್ಷವು ನಿರ್ಧರಿಸಿದೆ.

‘‘82%ದಷ್ಟಿರುವ ಪರಿಶಿಷ್ಟಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ)ಗಳುಹಾಗೂಇತರ ಹಿಂದುಳಿದವರ್ಗ (ಒಬಿಸಿ)ಗಳ ಜನರಸಾಮಾಜಿಕ ನ್ಯಾಯಮತ್ತು ಸಂವಿಧಾನದ ಮೂಲರಚನೆಯನ್ನು ಕಾಪಾಡಲುಮತ್ತು ಮಂಡಲ್ ಆಯೋಗ ಶಿಫಾರಸು ಮಾಡಿರುವ ಮೀಸಲಾತಿಯ ಪರವಾಗಿ ನೀಡಲಾಗಿರುವ ತೀರ್ಪನ್ನುಎತ್ತಿಹಿಡಿಯಲು ನಾವುಇದನ್ನು ಮಾಡಲಿದ್ದೇವೆ’’ ಎಂದು ದ್ರಾವಿಡಮುನ್ನೇತ್ರಕಳಗಮ್ (ಡಿಎಮ್‌ಕೆ) ಪ್ರಧಾನ ಕಾರ್ಯದರ್ಶಿಹಾಗೂತಮಿಳುನಾಡುಸಚಿವ ದುರೈಮುರುಗನ್ ಹೇಳಿದ್ದಾರೆಎಂದು ‘ದ ಹಿಂದೂ’ ವರದಿ ಮಾಡಿದೆ.

ಸೋಮವಾರ ಸುಪ್ರೀಂ ಕೋರ್ಟ್‌ನಐವರು ಸದಸ್ಯರ ಸಂವಿಧಾನ ಪೀಠವೊಂದು, ಆರ್ಥಿಕವಾಗಿ ಹಿಂದುಳಿದಿರುವಮೇಲ್ಜಾತಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 10% ಮೀಸಲಾತಿ ನೀಡುವಕೇಂದ್ರ ಸರಕಾರದ 2019ರ ಕಾಯ್ದೆಗೆ 3-2ರ ಬಹುಮತದಿಂದಅನಮೋದನೆ ನೀಡಿದೆ. ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಬೇಲಾ ತ್ರಿವೇದಿ ಮತ್ತು ಜೆ.ಬಿ. ಪರ್ದಿವಾಲಾಕಾಯ್ದೆಯ ಪರವಾಗಿ ತೀರ್ಪು ನೀಡಿದರೆ, ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಮತ್ತು ನ್ಯಾ. ರವೀಂದ್ರ ಭಟ್ ಕಾಯ್ದೆಗೆವಿರುದ್ಧವಾಗಿ ತೀರ್ಪು ನೀಡಿದರು.

ಡಿಎಂಕೆಯು ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು ಟೀಕಿಸಿದೆ. ಇದು ನಮ್ಮ ಶತಮಾನ ಅವಧಿಯ ಸಾಮಾಜಿಕ ನ್ಯಾಯಹೋರಾಟಕ್ಕೆ ದೊರೆತ ಹಿನ್ನಡೆಯಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಸೋಮವಾರ ಪ್ರತಿಕ್ರಿಯಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆಚರ್ಚಿಸಲು  ನವೆಂಬರ್ 12ರಂದು ಎಲ್ಲಾ ರಾಜಕೀಯ ಪಕ್ಷಗಳ ಸಭೆ ಕರೆಯುವುದಾಗಿ ಡಿಎಂಕೆ ಮಂಗಳವಾರ ತಿಳಿಸಿದೆ.

Similar News