ಗುಜರಾತ್:ಇನ್ನೋರ್ವ ಕಾಂಗ್ರೆಸ್ ಶಾಸಕ ಬಿಜೆಪಿಗೆ ಸೇರ್ಪಡೆ

Update: 2022-11-09 18:05 GMT

ಅಹ್ಮದಾಬಾದ್,ನ.9: ಹಿರಿಯ ಕಾಂಗ್ರೆಸ್ ಶಾಸಕ ಭಗವಾನ ಬಾರಡ್ ಅವರು ಬುಧವಾರ ಶಾಸಕ ಸ್ಥಾನ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು,ಬಿಜೆಪಿಗೆ ಸೇರ್ಪಡೆಗೊಳ್ಳಲು ಸಜ್ಜಾಗಿದ್ದಾರೆ. ಇದರೊಂದಿಗೆ ಗುಜರಾತ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್‌ಗೆ ಸತತ ಎರಡನೇ ದಿನವೂ ಹಿನ್ನಡೆಯುಂಟಾಗಿದೆ. ಮಂಗಳವಾರವಷ್ಟೇ ಹಿರಿಯ ಕಾಂಗ್ರೆಸ್ ಶಾಸಕ ಹಾಗೂ ಬುಡಕಟ್ಟು ನಾಯಕ ಮೋಹನಸಿನ್ಹ ರಥ್ವಾ ಅವರು ಶಾಸಕ ಸ್ಥಾನಕ್ಕೆ ಮತ್ತು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಗಿರ್ ಸೋಮನಾಥ ಜಿಲ್ಲೆಯ ತಲಾಲಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬಾರಡ್,ತನ್ನ ಬೆಂಬಲಿಗರೊಂದಿಗೆ ಸಮಾಲೋಚಿಸಿದ ಬಳಿಕ ಪಕ್ಷವನ್ನು ತೊರೆಯಲು ನಿರ್ಧರಿಸಿದ್ದೇನೆ ಮತ್ತು ಚುನಾವಣಾ ಟಿಕೆಟ್‌ಗಾಗಿ ಯಾವುದೇ ಪೂರ್ವ ಷರತ್ತು ಇಲ್ಲದೆ ಬಿಜಿಪಿಗೆ ಸೇರುತ್ತಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.

Similar News