ಗುಜರಾತ್‌ನ ಮೊರ್ಬಿಯಲ್ಲಿ ಜೀವ ಉಳಿಸಲು ನದಿಗೆ ಹಾರಿದ್ದ ಮಾಜಿ ಶಾಸಕನನ್ನು ಚುನಾವಣಾ ಕಣಕ್ಕಿಳಿಸಿದ ಬಿಜೆಪಿ

Update: 2022-11-10 06:45 GMT

ಹೊಸದಿಲ್ಲಿ: ಗುಜರಾತ್‌ನ ಮೊರ್ಬಿಯಲ್ಲಿ ಸಂಭವಿಸಿದ ಮಾರಣಾಂತಿಕ ತೂಗು ಸೇತುವೆ ಕುಸಿತದ ನಂತರ ಜನರ ಜೀವ ಉಳಿಸಿದ್ದ ಮಾಜಿ ಶಾಸಕನನ್ನು ಬಿಜೆಪಿ ಮುಂದಿನ ತಿಂಗಳು ರಾಜ್ಯದಲ್ಲಿ ನಡೆಯಲಿರುವ ಚುನಾವಣೆಗೆ ನಿಲ್ಲಿಸಿದೆ.

60 ವರ್ಷದ ಕಾಂತಿಲಾಲ್ ಅಮೃತಿಯಾ ಮೊರ್ಬಿಯಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮೊರ್ಬಿಯ ಹಾಲಿ ಶಾಸಕ ಬ್ರಿಜೇಶ್ ಮೆರ್ಜಾ ಅವರನ್ನು ಕೈಬಿಡಲಾಗಿದೆ.

ಅಕ್ಟೋಬರ್ 30 ರಂದು ಶತಮಾನದಷ್ಟು ಹಳೆಯದಾದ ತೂಗು ಸೇತುವೆಯ ಕೇಬಲ್‌ಗಳು ಮುರಿದು ಬಿದ್ದ ನಂತರ ಅಮೃತಿಯ ಲೈಫ್ ಟ್ಯೂಬ್ ಧರಿಸಿ ನದಿಗೆ ಬಿದ್ದ ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದು ವೀಡಿಯೊಗಳಲ್ಲಿ ಕಂಡುಬಂದಿದೆ.

ಜೀವ ಉಳಿಸಲು ಅಮೃತಿಯಾ ನದಿಗೆ ಧುಮುಕಿದ್ದಾರೆ ಎಂದು ವಿವಿಧ ವರದಿಗಳು ಹೇಳಿವೆ. ಈ ಸಾಹಸವು ಅವರಿಗೆ ಗುಜರಾತ್ ಚುನಾವಣೆಯಲ್ಲಿ ಮೊರ್ಬಿ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ "ಟಿಕೆಟ್" ತಂದುಕೊಟ್ಟಿತು ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯ ಗುಜರಾತ್ ಅಭ್ಯರ್ಥಿಗಳ ಮೂಲ ಪಟ್ಟಿಯಲ್ಲಿ ಅಮೃತಿಯಾ ಹೆಸರು ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.

ತೂಗು ಸೇತುವೆ ದುರಂತದಲ್ಲಿ ಸುಮಾರು 135 ಜನರು ಸಾವನ್ನಪ್ಪಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಅತ್ಯಂತ ದೊಡ್ಡ ದುರಂತವಾಗಿದೆ.

Similar News