×
Ad

ಗುಜರಾತ್: ಪಕ್ಷ ತೊರೆದ ಕಾಂಗ್ರೆಸ್ ಶಾಸಕ ಭವೇಶ್‌ ಕಟಾರ: 2 ದಿನಗಳಲ್ಲಿ ಮೂರನೇ ಶಾಸಕನ ಪಕ್ಷಾಂತರ !

Update: 2022-11-11 00:04 IST

ಅಹ್ಮದಾಬಾದ್, ನ. 10: ಗುಜರಾತ್‌ನ ಝಲೋಡ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಭವೇಶ್ ಕಟಾರ ಬುಧವಾರ ರಾತ್ರಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳು ಇರುವಾಗ ಈ ಬೆಳವಣಿಗೆ ಸಂಭವಿಸಿದೆ. ಕಳೆದ ಎರಡು ದಿನಗಳಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಮೂರನೇ ಶಾಸಕ ಕಟಾರ ಆಗಿದ್ದಾರೆ. ಅವರು ಶೀಘ್ರದಲ್ಲೇ ಬಿಜೆಪಿ ಸೇರುವ ನಿರೀಕ್ಷೆಯಿದೆ.

ಬುಧವಾರ ಕಾಂಗ್ರೆಸ್ ಶಾಸಕರಾದ ಭಗವಾನ್ ಬರಾದ್ ಮತ್ತು ಮೋಹನ್‌ಸಿನ್ಹ ರಾತ್ವ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ.

ಬರಾದ್ ಗಿರ್ ಸೋಮನಾಥ ಜಿಲ್ಲೆಯ ತಲಾಲ ಕ್ಷೇತ್ರದ ಶಾಸಕರಾಗಿದ್ದಾರೆ. ಅದೇ ವೇಳೆ, 10 ಬಾರಿಯ ಕಾಂಗ್ರೆಸ್ ಶಾಸಕ ಹಾಗೂ ಪ್ರಮುಖ ಆದಿವಾಸಿ ನಾಯಕ ರಾತ್ವ, ಚುನಾವಣೆಯಲ್ಲಿ ಸ್ಪರ್ಧಿಸಲು ಈ ಬಾರಿ ನಾನು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೇಳುವುದಿಲ್ಲ, ಆದರೆ ನನ್ನ ಸ್ಥಾನದಲ್ಲಿ ನನ್ನ ಮಗನನ್ನು ಕಾಂಗ್ರೆಸ್ ಸ್ಪರ್ಧೆಗಿಳಿಸಬೇಕು ಎಂದು ಬಯಸುತ್ತೇನೆ ಎಂದು ಹೇಳಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು 5ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.

Similar News