ಯೂಟ್ಯೂಬರ್ ಸವುಕ್ಕು ಶಂಕರ್ ಶಿಕ್ಷೆಯನ್ನು ಅಮಾನತಿನಲ್ಲಿಟ್ಟ ಸುಪ್ರೀಂ ಕೋರ್ಟ್

Update: 2022-11-11 16:29 GMT

ಹೊಸದಿಲ್ಲಿ, ನ. 11: ನ್ಯಾಯಾಂಗ ನಿಂದನೆಗಾಗಿ ಯೂಟ್ಯೂಬರ್ ಸವುಕ್ಕು ಶಂಕರ್ಗೆ ಮದರಾಸು ಹೈಕೋರ್ಟ್(High Court) ವಿಧಿಸಿದ್ಧ ಆರು ತಿಂಗಳ ಜೈಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಅಮಾನತಿನಲ್ಲಿಟ್ಟಿದೆ.

‘‘ಇಡೀ ನ್ಯಾಯಾಂಗ ವ್ಯವಸ್ಥೆಯು ಭ್ರಷ್ಟಾಚಾರದಿಂದ ತುಂಬಿ ಹೋಗಿದೆ’’ ("The entire judicial system is riddled with corruption.")ಎಂಬುದಾಗಿ ಸವುಕ್ಕು ಶಂಕರ್ (Shankar)ತನ್ನ ಯೂಟ್ಯೂಬ್ ಚಾನೆಲ್ ‘ರೆಡ್ಪಿಕ್ಸ್’('Redpiks')ನಲ್ಲಿ ಹೇಳಿದ್ದರು. ಅದಕ್ಕಾಗಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದ ಮದರಾಸು ಹೈಕೋರ್ಟ್ ಸೆಪ್ಟಂಬರ್ 15ರಂದು ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು.

Similar News