ಆಫ್ಘಾನ್ ನಲ್ಲಿ 2.28 ಕೋಟಿ ಜನ ಹಸಿವಿನಿಂದ ಬಾಧಿತರು’: ವಿಶ್ವಸಂಸ್ಥೆ

Update: 2022-11-11 17:44 GMT

ಕಾಬೂಲ್,ನ.10: ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ (The Taliban)ನಿಯಂತ್ರಣ ಸಾಧಿಸಿದಾಗಿನಿಂದ ಆ ದೇಶವು ಜಗತ್ತಿನಲ್ಲೇ ಅತ್ಯಂತ ವ್ಯಾಪಕವಾದ ಹಾಗೂ ಅತ್ಯಂತ ಗಂಭೀರವಾದ ಆಹಾರದ ಬಿಕ್ಕಟ್ಟನ್ನು ಎದುರಿಸುತ್ತಿದೆಯೆಂದು ವಿಶ್ವಸಂಸ್ತೆಯ ಆಹಾರ ಹಾಗೂ ಕೃಷಿ ಸಂಘಟನೆ ವರದಿಯೊಂದರಲ್ಲಿ ತಿಳಿಸಿದೆ. 2022ರಲ್ಲಿ ಅಫ್ಘಾನಿಸ್ತಾನದಲ್ಲಿ ಆಹಾರದ ಅಭದ್ರತೆ ಉಲ್ಬಣಿಸಿದೆ ಎಂದು ಅದು ಹೇಳಿದೆ.

ಅಫ್ಘಾನಿಸ್ತಾನ(Afghanistan)ದಲ್ಲಿ 2.28 ಕೋಟಿ ಜನರು ಹಸಿವಿನಿಂದ ಬಾಧಿತರಾಗಿದ್ದು, ಇದು ಆ ದೇಶ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತಲೂ ಅಧಿಕವಾಗಿದೆ. ಬರಗಾಲ, ಸಂಘರ್ಷ ಹಾಗೂ ರಾಜಕೀಯ ಅಸ್ಥಿರತೆಯ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ಹಸಿವಿನ ಬಿಕ್ಕಟ್ಟು ತಾಂಡವವಾಡುತ್ತಿದೆಯೆಂದು ವರದಿ ತಿಳಿಸಿದೆ.

ಈ ಮಧ್ಯೆ ವಿಶ್ವ ಆರೋಗ್ಯ ಕಾರ್ಯಕ್ರಮ ಕೂಡಾ ಅಫ್ಘಾನಿಸ್ತಾನ ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

Similar News