ಸಮಾಜದಲ್ಲಿ ಆಕ್ರೋಶವಿದೆ ಎನ್ನುವುದಷ್ಟೇ ವಾಕ್ ಸ್ವಾತಂತ್ರ ಹತ್ತಿಕ್ಕಲು ಸಮರ್ಥನೆಯಾಗಲಾರದು: ದಿಲ್ಲಿ ನ್ಯಾಯಾಲಯ

Update: 2022-11-12 17:03 GMT

ಹೊಸದಿಲ್ಲಿ, ನ. 12: ಸಮಾಜದಲ್ಲಿ ಆಕ್ರೋಶವಿದೆ ಎನ್ನುವುದು ವಾಕ್ ಸ್ವಾತಂತ್ರವನ್ನು ಹತ್ತಿಕ್ಕಲು ಸರ್ಥನೆಯಾಗಲಾರದು ಎಂದು ದಿಲ್ಲಿಯ ನ್ಯಾಯಾಲಯವೊಂದು ಹೇಳಿದೆ ಎಂದು ‘ಲೈವ್ ಲಾ’ ಶನಿವಾರ ವರದಿ ಮಾಡಿದೆ.

ಸಾಮಾಜಿಕ ಮಾಧ್ಯಮದಲ್ಲಿ ಜಮ್ಮು ಮತ್ತು ಕಾಶ್ಮೀರದ ಬಗ್ಗೆಹೇಳಿಕೆಗಳನ್ನು ನೀಡಿರುವುದಕ್ಕಾಗಿ ಕೇರಳದ ಶಾಸಕ ಕೆ.ಟಿ. ಜಲೀಲ್ ವಿರುದ್ಧ ದೇಶದ್ರೋಹ ಮೊಕದ್ದಮೆಯನ್ನು ದಾಖಲಿಸಬೇಕು ಎಂದು ಕೋರಿಸಲ್ಲಿಸಲಾಗಿರುವ ಅರ್ಜಿಯವಿಚಾರಣೆ ನಡೆಸಿದ ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಬಳಿಕ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ‘ಆಝಾದ್ ಕಾಶ್ಮೀರ’ವಾಗಿದೆ ಹಾಗೂ ಜಮ್ಮು ಮತ್ತು ಕಾಶ್ಮೀರವು ‘ಭಾರತ ಆಕ್ರಮಿತ ಜಮ್ಮು ಮತ್ತು ಕಾಶ್ಮೀರವಾಗಿದೆ” ಎಂಬುದಾಗಿ ಜಲೀಲ್ ಆಗಸ್ಟ್ನಲ್ಲಿ ಫೇಸ್ಬುಕ್ನಲ್ಲಿ ಬರೆದಿದ್ದರು ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.

“ಆರೋಪಿಯು ನೀಡಿದ್ದಾರೆನ್ನಲಾದ ಹೇಳಿಕೆಗಳು ಅಪ್ರಿಯ, ಆಕ್ರೋಶಕಾರಿಮತ್ತು ಆಘಾತಕಾರಿ ಎನ್ನುವುದರ ಅರಿವು ನ್ಯಾಯಾಲಯಕ್ಕಿದೆ. ಆದರೆ, ಆಘಾತಕಾರಿ ಎಂಬುದಾಗಿ ಸಮಾಜವು ಭಾವಿಸುವ ಕೃತ್ಯಗಳಿಗೆ ವಾಕ್ ಸ್ವಾತಂತ್ರ ದರಕ್ಷಣೆಯಿದೆ ಎನ್ನುವುದನ್ನು ಗಮನದಲ್ಲಿರಿಸಬೇಕು’’ ಎಂದು ಹೆಚ್ಚುವರಿ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ ಹೇಳಿದರು.

ವಕೀಲ ಜಿ.ಎಸ್. ಮಣಿ, ಜಲೀಲ್ ವಿರುದ್ಧ ದೂರು ಸಲ್ಲಿಸಿದ್ದರು. ಕೇರಳ ಶಾಸಕ ತನ್ನ ಸಾಮಾಜಿಕ ಮಾಧ್ಯಮ ಹೇಳಿಕೆಯಲ್ಲಿ ‘‘ರಾಷ್ಟ್ರವಿರೋಧಿ ಮಾತುಗಳನ್ನು’’ ಆಡಿದ್ದಾರೆ ಎಂದು ಆರೋಪಿಸಿದ್ದರು.

Similar News