ಉಚಿತ ಮಧುಮೇಹ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟನೆ
ಉಡುಪಿ : ಉಡುಪಿ ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆ ಹಾಗೂ ನೇತ್ರಜ್ಯೋತಿ ಕಾಲೇಜಿನ ಜಂಟಿ ಆಶ್ರಯ ದಲ್ಲಿ ವಿಶ್ವ ಮಧುಮೇಹ ದಿನಾ ಚರಣೆಯ ಅಂಗವಾಗಿ ಉಚಿತ ಮಧುಮೇಹ ಕಣ್ಣಿನ ತಪಾಸಣಾ ಶಿಬಿರವು ಪ್ರಸಾದ್ ನೇತ್ರಾಲಯದಲ್ಲಿ ರವಿವಾರ ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಪ್ರಸಾದ್ ನೇತ್ರಾಲಯದ ರೆಟಿನಾ ತಜ್ಞ ಡಾ.ಶರತ್ ಹೆಗ್ಡೆ ಮಾತನಾಡಿ, ಸಾಮಾನ್ಯವಾಗಿ ಕಂಡುಬರುವ ಮಧುಮೇಹ ಖಾಯಿಲೆ ಯಿಂದಾಗಿ ದೇಹದ ಮೇಲೆ ಆಗುವ ದುಷ್ಪರಿಣಾಮಗಳಲ್ಲಿ, ಕಣ್ಣಿನ ನರಗಳ ಮೇಲಾಗುವ ಪ್ರಭಾವವು ಅಧಿಕವಾಗಿದೆ ಎಂದು ತಿಳಿಸಿದರು.
ಮಧುಮೇಹ ಇರುವವರು ಇದರ ನಿಯಂತ್ರಣಕ್ಕಾಗಿ ನಿರಂತರ ಆಹಾರ ಪಥ್ಯ, ವ್ಯಾಯಾಮ, ಔಷಧೋಪಚಾರ ಗಳನ್ನು ನಡೆಸಿಕೊಂಡು ಬರುವುದ ರೊಂದಿಗೆ, ಪ್ರತಿ 6 ತಿಂಗಳಿಗೊಮ್ಮೆ ತಮ್ಮ ಕಣ್ಣುಗಳ ಪರೀಕ್ಷೆ ಮಾಡಿಸಿಕೊಳ್ಳು ವುದು ಅತಿ ಅವಶ್ಯಕವಾಗಿರುತ್ತದೆ. ಇದರ ಬಗ್ಗೆ ಸರಿಯಾದ ತಪಾಸಣೆ ಮತ್ತು ಚಿಕಿತ್ಸೆಯನ್ನು ಪಡೆದುಕೊಳ್ಳದಿದ್ದರೆ ಕಣ್ಣಿನ ದೃಷ್ಟಿಯನ್ನು ಸಂಪೂರ್ಣ ಕಳೆದು ಕೊಳ್ಳುವ ಸಾಧ್ಯತೆ ಇರುತ್ತದೆ ಎಂದರು.
ಪ್ರಸಾದ್ ನೇತ್ರಾಲಯದ ನೇತ್ರವೈದ್ಯೆ ಡಾ.ಅರ್ಚನಾ, ರೆಟಿನಾ ವಿಭಾಗದ ಪ್ರಮೀಳಾ ಹಾಗೂ ನೇತ್ರಜ್ಯೋತಿ ಕಾಲೇಜಿನ ಆಪ್ಟಮೆಟ್ರಿ ವಿಭಾಗದ ವಿದ್ಯಾರ್ಥಿ ಗಳು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಪ್ರಸಾದ್ ನೇತ್ರಾಲಯದ ಆಡಳಿತಾಧಿಕಾರಿ ಎಂ.ವಿ.ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನೇತ್ರಜ್ಯೋತಿ ಕಾಲೇಜಿನ ಆಡಳಿತಾಧಿಕಾರಿ ಅಬ್ದುಲ್ ಖಾದರ್ ವಂದಿಸಿದರು.