×
Ad

ದಿನಸಿ ಅಂಗಡಿಗೆ ನುಗ್ಗಿ ಕಳವು

Update: 2022-11-13 21:31 IST

ಕಾರ್ಕಳ: ನಿಟ್ಟೆ ಬಾಬಕ್ಕ ಕಂಪ್ಲೆಕ್ಸ್‌ನಲ್ಲಿರುವ ದಿನಸಿ ಅಂಗಡಿಗೆ ನ.13ರಂದು ಬೆಳಗಿನ ಜಾವ ನುಗ್ಗಿದ ದುಷ್ಕರ್ಮಿಗಳು ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ದ್ವಿಚಕ್ರ ವಾಹನದಲ್ಲಿ ಬಂದು, ನಿಟ್ಟೆ ಅಗನೊಟ್ಟು ನಿವಾಸಿ ಸದಾನಂದ ಶೆಟ್ಟಿ ಎಂಬವರ ಸ್ವಸ್ತಿಕ್ ಎಂಟರ್‌ಪ್ರೈಸಸ್ ಎಂಬ ದಿನಸಿ ಅಂಗಡಿಯ ಶಟರ್  ಬೀಗ ಮುರಿದು ಒಳನುಗ್ಗಿ, ಡ್ರಾವರ್ ಮತ್ತು ಡಬ್ಬದಲ್ಲಿಟ್ಟಿದ್ದ 8000 ರೂ. ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News