ಬಿಜೆಪಿ ಟಿಕೆಟ್ ನಿರಾಕರಣೆ: ಪಕ್ಷೇತರರಾಗಿ ಸ್ಪರ್ಧಿಸಲು ಮಧುಭಾಯಿ ಶ್ರೀವಾಸ್ತವ ನಿರ್ಧಾರ

ಗುಜರಾತ್ ವಿಧಾನಸಭಾ ಚುನಾವಣೆ

Update: 2022-11-14 09:35 GMT

ಅಹಮದಾಬಾದ್: ಗುಜರಾತ್‌ನ ವಘೋಡಿಯಾ ಕ್ಷೇತ್ರದಿಂದ ಕಳೆದ ಬಾರಿ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದಿರುವ ಆರು ಬಾರಿಯ  ಶಾಸಕ ಮಧುಭಾಯಿ ಶ್ರೀವಾಸ್ತವ  ಆಡಳಿತ ಪಕ್ಷವು ತಮಗೆ ಈ ಬಾರಿ ಟಿಕೆಟ್ ನಿರಕಾರಿಸಿರುವ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ

 ನರೇಂದ್ರ ಮೋದಿ ಹಾಗೂ  ಅಮಿತ್ ಶಾ ಅವರ ಒತ್ತಾಯದ ಮೇರೆಗ  25 ವರ್ಷಗಳ ಹಿಂದೆ ನಾನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೆ ಎಂದು ಅವರು ಹೇಳಿದ್ದಾರೆ

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಟಿಕೆಟ್ ಬಗ್ಗೆ "ಏನೂ ಮಾಡಲು ಸಾಧ್ಯವಿಲ್ಲ" ಏಕೆಂದರೆ "ಎಲ್ಲವನ್ನೂ ದಿಲ್ಲಿಯ ಉನ್ನತ ನಾಯಕತ್ವ ನಿರ್ಧರಿಸುತ್ತದೆ" ಎಂದು 2002 ರ ಗುಜರಾತ್ ಗಲಭೆ ಪ್ರಕರಣದಲ್ಲಿ ಒಮ್ಮೆ ಹೆಸರಿಸಲ್ಪಟ್ಟ ಸ್ಥಳೀಯ ಪ್ರಬಲ ರಾಜಕಾರಣಿ ಶ್ರೀವಾಸ್ತವ ಹೇಳಿದರು.

“ಸಿಎಂ ಪಟೇಲ್ ಅವರೊಂದಿಗೆ ನಾನು ಮಾತನಾಡಿಲ್ಲ.  ನಾನೇಕೆ ಅವರೊಂದಿಗೆ ಮಾತನಾಡಲಿ? ನಾನು ಪ್ರಧಾನಿ ಮೋದಿ ಹಾಗೂ ಶಾ ಅವರೊಂದಿಗೆ ನೇರ ಸಂಪರ್ಕವನ್ನು ಹೊಂದಿದ್ದೇನೆ. ಆದರೆ ಟಿಕೆಟ್ ನಿರಾಕರಣೆಯ ನಂತರ ಅವರು ನನ್ನೊಂದಿಗೆ ಮಾತನಾಡಿಲ್ಲ’’ ಎಂದು ಅವರು ಹೇಳಿದರು.

ಕಳೆದ ಕೆಲವು ದಿನಗಳಿಂದ ರಾಜ್ಯ ಸಚಿವ ಹರ್ಷ ಸಾಂಘವಿ ಅವರನ್ನು ಭೇಟಿ ಮಾಡಲು ನಿರಾಕರಿಸಿದ ಆರು ಬಂಡಾಯ ನಾಯಕರಲ್ಲಿ ಶ್ರೀವಾಸ್ತವ ಕೂಡ ಒಬ್ಬರು ಎಂದು ಮೂಲಗಳು ತಿಳಿಸಿವೆ.

ನನ್ನ ಸ್ಥಾನಕ್ಕೆ ಟಿಕೆಟ್ ಪಡೆದಿರುವ ವಡೋದರಾ ಜಿಲ್ಲಾ ಬಿಜೆಪಿ ಮುಖ್ಯಸ್ಥ ಅಶ್ವಿನ್ ಪಟೇಲ್ ಸ್ಥಳೀಯ ಚುನಾವಣೆಯಲ್ಲೂ ಗೆದ್ದಿಲ್ಲ. ನಾನು ನಿಸ್ಸಂಶಯವಾಗಿ ಬಿಜೆಪಿ ಬಗ್ಗೆ ತುಂಬಾ ಅಸಮಾಧಾನ ಹಾಗೂ ಕೋಪಗೊಂಡಿದ್ದೇನೆ. ನಾನು ಎಲ್ಲಾ ಹುದ್ದೆಗಳನ್ನು ತ್ಯಜಿಸಿದ್ದೇನೆ ಎಂದು ಶ್ರೀವಾಸ್ತವ ಹೇಳಿದರು.

ಶ್ರೀವಾಸ್ತವ ಅವರು 1995 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದ ನಂತರ ಬಿಜೆಪಿ ಸೇರಿದ್ದರು. ಅವರು ಹಾಗೂ  ಅವರ ಕುಟುಂಬ ಸದಸ್ಯರು ಕಾಂಗ್ರೆಸ್, ಜನತಾ ದಳ ಮತ್ತು ಇತರ ಸಂಘಟನೆಗಳಲ್ಲಿಯೂ ಇದ್ದಾರೆ.

Similar News