ಲೋಕಸಭೆ, ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆ : ಬಿಜೆಪಿ-ಶಿಂಧೆ ನೇತೃತ್ವದ ಶಿವಸೇನೆ ಜಂಟಿ ಸ್ಪರ್ಧೆ

Update: 2022-11-14 15:28 GMT

 ಮುಂಬೈ, ನ. 14: ರಾಜ್ಯ ವಿಧಾನ ಸಭೆ ಚುನಾವಣೆ ಹಾಗೂ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ತನ್ನ ಪಕ್ಷ ಹಾಗೂ ಏಕನಾಥ ಶಿಂಧೆ (Eknath Shinde)ನೇತೃತ್ವದ ಶಿವಸೇನೆ ಜಂಟಿಯಾಗಿ ಸ್ಪರ್ಧಿಸಲಿದೆ ಎಂದು ಬಿಜೆಪಿಯ ಮಹಾರಾಷ್ಟ್ರ ಘಟಕದ ವರಿಷ್ಠ ಚಂದ್ರಶೇಖರ ಬಾವಂಕುಲೆ (Chandrasekhara Bawankule)ಅವರು ಸೋಮವಾರ ತಿಳಿಸಿದ್ದಾರೆ.

45 ಲೋಕಸಭಾ ಕ್ಷೇತ್ರಗಳು ಹಾಗೂ 200 ವಿಧಾನ ಸಭಾ ಕ್ಷೇತ್ರಗಳಲ್ಲಿ ಜಯ ಗಳಿಸಲು ಶಿಂದೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ (Devendra Fadnavis)ನೇತೃತ್ವದ ಅಡಿಯಲ್ಲಿ ಮೈತ್ರಿ ರೂಪಿಸಲಾಗಿದೆ ಎಂದು ಬಾವಂಕುಲೆ ಅವರು ತಿಳಿಸಿದರು. ಮುಂಬೈ ನಗರ ಸಭೆ ಚುನಾವಣೆಯಲ್ಲಿ ಬಾಲಾಸಾಹೇಬಾಚಿ (Balasahebachi)ಶಿವಸೇನೆ ಎಂದು ಕರೆಯಲಾಗುವ ಶಿಂದೆ ಬಣದೊಂದಿಗೆ ಸ್ಪರ್ಧಿಸಲಿದೆ ಎಂದು ಈ ಹಿಂದೆ ಬಿಜೆಪಿ ಘೋಷಿಸಿತ್ತು.

‘‘ಶಿವಸೇನೆಯ ವರಿಷ್ಠ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತವನ್ನು ಅನುಸರಿಸುವವರನ್ನು ನಾನು ಶಿವಸೇನೆ ಎಂದು ಹೇಳುತ್ತಿರುವುದು. ಬಾಳಾ ಸಾಹೇಬ್ ಠಾಕ್ರೆ ಅವರ ಸಿದ್ಧಾಂತದಲ್ಲಿ ಒಂದಾದ ಹಿಂದುತ್ವವನ್ನು ಏಕನಾಥ್ ಜಿ ಶಿಂಧೆ ಅವರು ಅನುಸರಿಸುತ್ತಿದ್ದಾರೆ’’ ಎಂದು ಫಡ್ನಾವಿಸ್ ಹೇಳಿದರು.

Similar News