ಲಾಲ್‌ ಸಿಂಗ್‌ ಚಡ್ಡಾ ಸೋಲಿನ ಬಳಿಕ ಕಾಣಿಸಿಕೊಂಡ ಆಮಿರ್: ಕಾಜೊಲ್‌ ನೂತನ ಚಿತ್ರದ ಟ್ರೇಲರ್‌ನಲ್ಲಿ ಮಿ.ಪರ್ಫೆಕ್ಷನಿಸ್ಟ್

Update: 2022-11-14 15:42 GMT

ಮುಂಬೈ: ಬಾಲಿವುಡ್‌ ನಟಿ ಕಾಜೋಲ್​ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಸಲಾಮ್​ ವೆಂಕಿ' (salaam venky)ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ಟ್ರೇಲರ್‌ ಕೊನೆಯಲ್ಲಿ ಮಿ. ಪರ್ಫೆಕ್ಷನಿಸ್ಟ್‌ ಖ್ಯಾತಿಯ ಆಮಿರ್‌ ಖಾನ್‌ ಕಾಣಿಸಿಕೊಂಡಿದ್ದಾರೆ. ಬಹು ನಿರೀಕ್ಷಿತ ಲಾಲ್‌ ಸಿಂಗ್‌ ಚಡ್ಡಾ ಸೋಲಿನ ಬಳಿಕ ಆಮಿರ್‌ ಖಾನ್‌ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.

ಲಕ್ಷಾಂತರ ಮಂದಿ ಈಗಾಗಲೇ ಟ್ರೈಲರ್​ ವೀಕ್ಷಣೆ ಮಾಡಿದ್ದು, ಚಿತ್ರದಲ್ಲಿ ವಿಶಾಲ್​ ಜೇತ್ವಾ, ರಾಹುಲ್​ ಬೋಸ್​, ರಾಜೀವ್​ ಖಂಡೇಲ್​ವಾಲ್​, ಅಹಾನಾ ಕುಮ್ರಾ, ಪ್ರಿಯಾಮಣಿ ಮತ್ತು ಪ್ರಕಾಶ್​ರಾಜ್​ ಕೂಡ ನಟಿಸಿದ್ದಾರೆ.  

ಕಾಜೋಲ್​ ಸುಜಾತಾ ಹೆಸರಿನ ಪಾತ್ರವನ್ನು ನಿರ್ವಹಿಸಿದ್ದು, ವೀಲ್‌ಚೇರ್‌ ಮೇಲೆ ಕುಳಿತ ಮಗನನ್ನು (ವೆಂಕಿ) ಪೋಷಿಸುವ ತಾಯಿ ಪಾತ್ರ ಇದು ಎಂದು ಚಿತ್ರತಂಡದ ಮೂಲಗಳು ಹೇಳಿಕೊಂಡಿವೆ. ವಿಶಾಲ್​ ಜೇತ್ವಾ ವೆಂಕಿ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ತಾಯಿ-ಮಗನ ಪಾತ್ರಗಳ ಸುತ್ತಲೇ ತಿರುಗುವ ಕಥಾ ಹಂದರವನ್ನು ಚಿತ್ರ ಹೊಂದಿದೆ ಎನ್ನುವುದು ಟ್ರೇಲರ್‌ ಹೇಳುತ್ತದೆ.  

ಈ ಸಿನಿಮಾವನ್ನು ರೇವತಿ ನಿರ್ದೇಶಿಸಿದ್ದು, ಸೂರಜ್​ ಸಿಂಗ್ ಹಾಗೂ ಶ್ರದ್ಧಾ ಅಗರ್​ವಾಲ್​ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಡಿಸೆಂಬರ್​ 9ರಂದು ತೆರೆಯ ಮೇಲೆ ಬರಲಿದೆ.

Full View

Similar News