ಉದಯಪುರ-ಅಹ್ಮದಾಬಾದ್ ರೈಲು ಮಾರ್ಗದಲ್ಲಿ ಸ್ಫೋಟ ಎನ್‌ಐಎಗೆ ತನಿಖೆಯ ಹೊಣೆ: ರಾಜಸ್ಥಾನ ಸಿ ಎಂ ಗೆಹ್ಲೋಟ್

Update: 2022-11-14 17:24 GMT

ಜೈಪುರ, ನ. 14: ಉದಯಪುರ-ಅಹ್ಮದಾಬಾದ್ ರೈಲು ಮಾರ್ಗದ ಬ್ರಾಡ್‌ಗೇಜ್ ಹಳಿಯಲ್ಲಿ ನಡೆದಿರುವ ಸ್ಫೋಟದ ತನಿಖೆಯನ್ನು ರಾಷ್ಟ್ರೀಯತನಿಖಾ ದಳ (ಎನ್‌ಐಎ)ಕ್ಕೆ ವಹಿಸಲಾಗಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot)ಸೋಮವಾರಹೇಳಿದ್ದಾರೆ.

‘‘ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ತನಿಖೆಗೆ ನಾವು ಎನ್‌ಐಎಯನ್ನು ಕರೆದಿದ್ದೇವೆ. ಘಟನೆಯ ಕಾರಣದ ಬಗ್ಗೆ ಅವರು ತನಿಖೆ ಮಾಡುತ್ತಾರೆ. ನಾವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ’’ ಎಂದು ಜೈಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್ ತಿಳಿಸಿದರು.

ಶನಿವಾರ ರಾತ್ರಿ ಸ್ಫೋಟ ಸಂಭವಿಸಿದ ಬಳಿಕ, ಉದಯಪುರ-ಅಹ್ಮದಾಬಾದ್ ರೈಲುಮಾರ್ಗದಲ್ಲಿ ರೈಲುಗಳ ಸಂಚಾರವನ್ನು ನಿಲ್ಲಿಸಲಾಗಿದೆ. ಸೋಮವಾರ ಬೆಳಗ್ಗೆ 9:20ಕ್ಕೆ ಈ ಮಾರ್ಗದಲ್ಲಿ ಗೂಡ್ಸ್ ರೈಲೊಂದು ಹೋಗಿದೆ. ಸ್ಫೋಟದ ಬಳಿಕ ಆ ಹಳಿಯ ಮೇಲೆ ರೈಲು ಹೋಗಿರುವುದು ಇದೇ ಮೊದಲ ಬಾರಿಯಾಗಿದೆ.

ಸ್ಲುಂಬರ್-ಮೇಘ (Slumber-cloud)ಹೆದ್ದಾರಿಯ ಓಡಾದಲ್ಲಿರುವ ರೈಲುಸೇತುವೆಯ ಸಮೀಪ ಸ್ಫೋಟಸಂಭವಿಸಿದ್ದು, ಹಳಿಗಳಿಗೆ ಹಾನಿಯಾಗಿದೆ.

ರಾತ್ರಿ ಸ್ಫೋಟದ ಸದ್ದು ಕೇಳಿದ ಬಳಿಕ, ನಾವು ರೈಲು, ಪೊಲೀಸ್ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆವು ಎಂದು ಸ್ಥಳೀಯರು ತಿಳಿಸಿದರು.

ಹಳಿಯ ದುರಸ್ತಿ ಕಾರ್ಯವನ್ನು ಸೋಮವಾರ ಮುಂಜಾನೆ 3:30ಕ್ಕೆ ಪೂರ್ಣಗೊಳಿಸಲಾಗಿದೆ ಎಂದು ವಾಯುವ್ಯ ಮುಖ್ಯಸಾರ್ವಜನಿಕ ಸಂಪರ್ಕಾಧಿಕಾರಿ (ಸಿಪಿಆರ್‌ಒ) ಶಶಿಕಿರಣ್(Sasikiran) ತಿಳಿಸಿದರು.

ಸ್ಫೋಟ ನಡೆಯುವ ಸುಮಾರು ನಾಲ್ಕು ಗಂಟೆಗಳ ಮೊದಲು ಹಳಿಯಲ್ಲಿ ರೈಲೊಂದು ಹಾದು ಹೋಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಹಳಿಯನ್ನು ಸ್ಫೋಟಿಸಲು ಪಿತೂರಿ ನಡೆದಿದೆ ಎಂದು ನಾವು ಶಂಕಿಸಿದ್ದೇವೆ ಹಾಗೂ ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದುಅವರು ತಿಳಿಸಿದರು.

ಉದಯಪುರಮತ್ತು ಅಹ್ಮದಾಬಾದ್ ನಡುವಿನ ಬ್ರಾಡ್‌ಗೇಜ್ ಹಳಿಯನ್ನು ಪ್ರಧಾನಿ ನರೇಂದ್ರಮೋದಿ (Narendra Modi)ಅಕ್ಟೋಬರ್ 31ರಂದು ಉದ್ಘಾಟಿಸಿದ್ದರು.

Similar News