ಭಾರತದ ವಾಟ್ಸ್ಯಾಪ್‌ ಮುಖ್ಯಸ್ಥ ರಾಜೀನಾಮೆ

Update: 2022-11-15 13:24 GMT

ಹೊಸದಿಲ್ಲಿ: ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರೀ ಬದಲಾವಣೆಗಳು ಜಗತ್ತಿನಾದ್ಯಂತ ಸಂಭವಿಸುತ್ತಿದ್ದು, ಇದೀಗ ಭಾರತದ ವಾಟ್ಸ್ಯಾಪ್‌ ಮುಖ್ಯಸ್ಥ ಹಾಗೂ ಮೆಟಾ ಇಂಡಿಯಾ ಪಬ್ಲಿಕ್‌ ಪಾಲಿಸಿ ಮುಖ್ಯಸ್ಥರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ndtv.com ವರದಿ ಮಾಡಿದೆ. 

ರಾಜೀವ್‌ ಅಗರ್‌ವಾಲ್‌ ಅವರು ತನಗೆ ದೊರೆತ ಮತ್ತೊಂದು ಅವಕಾಶವನ್ನು ನಿಭಾಯಿಸುವ ಸಲುವಾಗಿ ಮೆಟಾದಲ್ಲಿನ ತಮ್ಮ ಪಾತ್ರದಿಂದ ಕೆಳಗಿಳಿಯಲು ನಿರ್ಧಿರಿಸಿದ್ದು, ಅವರ ಮುಂದಿನ ಎಲ್ಲ ಪ್ರಯತ್ನಗಳಿಗೆ ಶುಭ ಹಾರೈಸುವುದಾಗಿ ಮೆಟಾ ತಿಳಿಸಿದೆ. ಭಾರತದಲ್ಲಿನ ಅತ್ಯುತ್ತಮ ಕೊಡುಗೆಗಳಿಗಾಗಿ ಅಭಿಜಿತ್‌ ಬೋಸ್‌ರವರಿಗೆ ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾತ್‌ಕಾರ್ಟ್ ಧನ್ಯವಾದಗಳನ್ನು ಅರ್ಪಿಸಿದರು.
 
ಮುಂದೆ, ಶಿವನಾಥ್ ತುಕ್ರಾಲ್ ಅವರನ್ನು ತನ್ನ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರತದಲ್ಲಿ ಮೆಟಾಗಾಗಿ ಸಾರ್ವಜನಿಕ ನೀತಿಯ ನಿರ್ದೇಶಕರಾಗಿ ನೇಮಕ ಮಾಡುವುದಾಗಿ ಮೆಟಾ ಘೋಷಿಸಿತು.

Similar News