ಕುಂದಾಪುರ: ಕಡಲ ತೀರಕ್ಕೆ ಅಪ್ಪಳಿಸಿದ ಮೀನುಗಾರಿಕಾ ಬೋಟ್
Update: 2022-11-15 21:27 IST
ಕುಂದಾಪುರ: ಮೀನುಗಾರಿಕಾ ಬೋಟೊಂದು ತೆಕ್ಕಟ್ಟೆ ಕೊರವಿ-ಕೊಮೆ ಕಡಲ ತೀರಕ್ಕೆ ಬಂದು ಅಪ್ಪಳಿಸಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಗಂಗೊಳ್ಳಿ ಮೂಲದ ಬೋಟ್ ಎನ್ನಲಾಗಿದ್ದು, ಬೋಟಿನಲ್ಲಿ ಆರು ಮಂದಿ ಮೀನುಗಾರರಿದ್ದರು ಎಂದು ತಿಳಿದುಬಂದಿದೆ.
ಸಮುದ್ರ ತಟಕ್ಕೆ ಬಂದು ನಿಂತ ಬೋಟ್ ಅನ್ನು ಸುರಕ್ಷಿತವಾಗಿ ನೀರಿನಿಂದ ಮೇಲೆತ್ತುವ ಕಾರ್ಯ ಮಂಗಳವಾರ ಸಂಜೆ ತನಕ ನಡೆದಿತ್ತು. ಬೋಟ್ ಒಳಗಿದ್ದ ಮೀನುಗಾರಿಕೆಯ ಪರಿಕರಗಳನ್ನು ಹೊರ ತೆಗೆಯಲಾಯಿತಾದರೂ ಕೂಡ ಹಾನಿ ಪ್ರಮಾಣ ತಿಳಿದು ಬಂದಿಲ್ಲ.