ವಿಮಾನ ಪ್ರಯಾಣದಲ್ಲಿ ಇನ್ನು ಮುಂದೆ ಮಾಸ್ಕ್‌ಗಳ ಬಳಕೆ ಕಡ್ಡಾಯವಲ್ಲ

Update: 2022-11-16 14:42 GMT

ಹೊಸದಿಲ್ಲಿ: ಇನ್ನು ಮುಂದೆ ವಿಮಾನ ಪ್ರಯಾಣದ ವೇಳೆ ಮಾಸ್ಕ್‌ಗಳ ಬಳಕೆ ಕಡ್ಡಾಯವಲ್ಲ. ಆದರೆ, ಆದ್ಯತೆಯಿಂದ ಪ್ರಯಾಣಿಕರೇ ಅದನ್ನು ಬಳಸಬೇಕು ಎಂದು ಕೊರೋನಾ ಸೋಂಕು ಸಂಖ್ಯೆ ಕಡಿಮೆಯಾಗುತ್ತಿರುವ ಬೆನ್ನಲ್ಲೇ ನಾಗರಿಕ ವಿಮಾನಯಾನ ಸಚಿವಾಲಯ ಇಂದು ಹೇಳಿದೆ.

ಇಲ್ಲಿಯವರೆಗೆ, ವಿಮಾನಗಳಲ್ಲಿ ಪ್ರಯಾಣಿಸುವಾಗ ಮಾಸ್ಕ್ ಅಥವಾ ಫೇಸ್ ಕವರ್‌ಗಳನ್ನು ಬಳಸುವುದು ಕಡ್ಡಾಯವಾಗಿತ್ತು.

COVID-19 ನಿರ್ವಹಣೆಯ ಸರ್ಕಾರದ ನೀತಿಗೆ ಅನುಗುಣವಾಗಿ ಇತ್ತೀಚಿನ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

 ಹಾಗಾಗಿ ವಿಮಾನದ ಒಳಗಿನ ಪ್ರಕಟಣೆಯಲ್ಲಿ, ಪ್ರಯಾಣಿಕರು ತಮ್ಮ ಆಯ್ಕೆಯಿಂದ ಮಾಸ್ಕ್ ಧರಿಸುವುದು ಸೂಕ್ತ ಎಂದು ಹೇಳಬೇಕೆಂದು ಸಚಿವಾಲಯ ವಿಮಾನಯಾನ ಸಂಸ್ಥೆಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ. ವಿಮಾನದಲ್ಲಿನ ಪ್ರಕಟಣೆಗಳ ಭಾಗವಾಗಿ ದಂಡ/ದಂಡದ ಕ್ರಮದ ಯಾವುದೇ ನಿರ್ದಿಷ್ಟ ಉಲ್ಲೇಖವನ್ನು ಘೋಷಿಸಬೇಕಾಗಿಲ್ಲ ಎಂದು ಅದು ಹೇಳಿದೆ.

Similar News