×
Ad

ಅಗ್ನಿಪಥ್ ಯೋಜನೆಯಡಿ ಆನ್‌ಲೈನ್ ಪರೀಕ್ಷೆಗೆ ನೋಂದಣಿ

Update: 2022-11-16 20:11 IST

ಉಡುಪಿ: ಅಗ್ನಿಪಥ್ ಯೋಜನೆಯಡಿ ಭಾರತೀಯ ವಾಯುಸೇನೆ ಯಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಆನ್‌ಲೈನ್ ಪರೀಕ್ಷೆಗೆ ಪೂರ್ವ ನೋಂದಣಿ ಪ್ರಕ್ರಿಯೆಗೆ ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್: -http://agnipathvayu.cdac.in- ಮೂಲಕ ಹೆಸರು ನೋಂದಾಯಿಸಲು ನವೆಂಬರ್ 23 ಕೊನೆಯ ದಿನ.

2002ರ ಜೂನ್ 27ರಿಂದ ಡಿಸೆಂಬರ್ 27ರ ನಡುವೆ ಜನಿಸಿರುವ, ಪಿಯುಸಿ ಯಲ್ಲಿ (ಕಲಾ,ಕಲೆ,ವಾಣಿಜ್ಯ, ವಿಜ್ಞಾನ ಮತ್ತು ಡಿಪ್ಲೋಮಾ) ಯಾವುದೇ ವಿಷಯಗಳಲ್ಲಿ ಕನಿಷ್ಠ ಶೇ.50 ಮತ್ತು ಇಂಗ್ಲೀಷ್ ವಿಷಯದಲ್ಲಿ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾದ ಅವಿವಾಹಿತ ಯುವಕ- ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ರಜತಾದ್ರಿ ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: 9945856670, 8197440155  ಮತ್ತು 8105618291ನ್ನು ಸಂಪರ್ಕಿಸ ಬಹುದು ಎಂದು ಜಿಲ್ಲಾ ಉದ್ಯೋಗ ವಿನಿಯಮ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar News