×
Ad

ಉಡುಪಿ: ಶಾಲಾ ಕ್ರೀಡಾಕೂಟದ ಸರ್ವಧರ್ಮ ಪ್ರಾರ್ಥನೆಯಲ್ಲಿ ಆಝಾನ್‌ಗೆ ಆಕ್ಷೇಪ

► ಶಂಕರನಾರಾಯಣ ಮದರ್ ಥೆರೆಸಾ ಮೆಮೋರಿಯಲ್ ಶಾಲೆಯಲ್ಲಿ ಘಟನೆ ► ಸ್ವಾಗತ ನೃತ್ಯದಲ್ಲಿ ಹಿಂದೂ, ಕ್ರೈಸ್ತ, ಮುಸ್ಲಿಂ ಹಾಡುಗಳಿಗೆ ವಿದ್ಯಾರ್ಥಿನಿಯರಿಂದ ನೃತ್ಯ

Update: 2022-11-16 20:55 IST

ಕುಂದಾಪುರ: ಶಂಕರನಾರಾಯಣದ ಸರಕಾರಿ ಕಾಲೇಜು ಮೈದಾನದಲ್ಲಿ ನ.15ರಂದು ನಡೆದ ಶಂಕರನಾರಾಯಣ ಮದರ್ ಥೆರೆಸಾ ಶಾಲೆಯ ಕ್ರೀಡಾಕೂಟದಲ್ಲಿ ಸರ್ವಧರ್ಮ ಪ್ರಾರ್ಥನೆಯ ಸ್ವಾಗತ ನೃತ್ಯದಲ್ಲಿ ಆಝಾನ್‌ಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ವರದಿಯಾಗಿದೆ.

ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ನಡೆದ ಸ್ವಾಗತ ನೃತ್ಯ ಕಾರ್ಯಕ್ರಮದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗಳ ಪ್ರಾರ್ಥನಾ ಗೀತೆಗೆ ವಿದ್ಯಾರ್ಥಿನಿಯರು ನೃತ್ಯ ಮಾಡಿದ್ದರು. ಇದರಲ್ಲಿ ಹಿಂದೂ ವಿದ್ಯಾರ್ಥಿನಿಯರು ಆಝಾನ್‌ಗೆ ನೃತ್ಯ ಮಾಡಿರುವ ವಿಡಿಯೋ ದೃಶ್ಯಾವಳಿ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿತ್ತು.

ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರು ಮೈದಾನಕ್ಕೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆಡಳಿತ ಮಂಡಳಿಯನ್ನು ತರಾಟೆ ಗೆತ್ತಿಕೊಂಡರು. ಘಟನೆ ಗಂಭೀರತೆ ಪಡೆಯುತ್ತಿದ್ದಂತೆಯೇ ಶಾಲೆಗೆ ಸಂಬಂಧ ಪಟ್ಟವರು ಕ್ಷಮೆ ಯಾಚಿಸಿದರು. ಈ ಎಲ್ಲ ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಪ್ರತಿಭಟನೆ: ಈ ಘಟನೆಯನ್ನು ಖಂಡಿಸಿ ಬುಧವಾರ ಶಂಕರನಾರಾಯಣದಲ್ಲಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಶಂಕರನಾರಾಯಣ ಕಾಲೇಜು ಮೈದಾನದಿಂದ ಮೆರವಣಿಗೆ ಸಾಗಿ ಶಂಕರ ನಾರಾಯಣ ಪೇಟೆಗೆ ಬಂದು ಪ್ರತಿಕೃತಿ ದಹನ ಮಾಡಲಾಯಿತು. ಮುಖಂಡ ರಾದ ಆದರ್ಶ ಕೆಲ, ಗಣೇಶ್ ಅರಸಮ್ಮನಕಾನು, ವಿಜಯ ಕುಮಾರ್ ಶೆಟ್ಟಿ ಗೋಳಿಯಂಗಡಿ, ಭಾಸ್ಕರ್ ಸಿದ್ಧಾಪುರ, ಗಣೇಶ್ ಗೋಳಿಯಂಗಡಿ, ಹರ್ಷ ಸಿದ್ಧಾಪುರ, ನವೀನ್ ಗಂಗೊಳ್ಳಿ ಮೊದಲಾದವರಿದ್ದರು. ಬಳಿಕ ಬಿ.ಇ.ಓ ಅವರಿಗೆ ಮನವಿ ನೀಡಲಾಯಿತು.

‘ಕ್ರೀಡಾಕೂಟದಲ್ಲಿ ಸರ್ವಧರ್ಮ ಪ್ರಾರ್ಥನೆಗಾಗಿ ಆಝಾನ್ ಬಳಸಿ ಕೊಂಡಿದ್ದೇವೆ. ಹಿಂದು, ಕ್ರೈಸ್ತ ಧರ್ಮಗಳನ್ನು ಹಾಡನ್ನು ಕೂಡ ಹಾಕಿದ್ದೇವೆ. ಮುಸ್ಲಿಮರ ಯಾವುದೇ ಹಾಡು ಸಿಗದಿದ್ದಾಗ ಆಝಾನ್ ಅನ್ನು ಈ ನೃತ್ಯಕ್ಕೆ ಬಳಸಿಕೊಂಡಿ ದ್ದೇವೆ. ಇದು ವಿವಾದ ಆಗುತ್ತದೆ ಎಂಬುದು ನಮಗೆ ಗೊತ್ತಿರಲಿಲ್ಲ.
-ಶಮಿತಾ ರಾವ್, ಮುಖ್ಯಸ್ಥರು, ಮದರ್ ಥೆರೆಸಾ ಶಾಲೆ

Full View

Similar News