ಐಎಎಫ್ ನ 32 ಮಾಜಿ ಮಹಿಳಾ ಅಧಿಕಾರಿಗಳಿಗೆ ಪೂರ್ಣ ಪಿಂಚಣಿ: ದಿಲ್ಲಿ ಹೈಕೋರ್ಟ್ ಐತಿಹಾಸಿಕ ತೀರ್ಪು
ಹೊಸದಿಲ್ಲಿ, ನ. 16: ಭಾರತೀಯ ವಾಯು ಪಡೆ (ಐಎಎಫ್)ಯಲ್ಲಿ ಅಲ್ಪಾವಧಿ ಸೇವಾ ಅವಧಿಗಿಂತಲೂ ಅಧಿಕ ಕಾಲ ಸೇವೆ ಸಲ್ಲಿಸುವ ಹಕ್ಕಿಗಾಗಿ ಹೋರಾಡುತ್ತಿರುವ 32 ಮಹಿಳೆಯರಿಗೆ ಪೂರ್ಣ ಪಿಂಚಣಿ ನೀಡುವಂತೆ ದಿಲ್ಲಿ ಉಚ್ಚ ನ್ಯಾಯಾಲ(Delhi High Court)ಯ ಐತಿಹಾಸಿಕ ತೀರ್ಪು ನೀಡಿದೆ. ಈ ಪೂರ್ಣ ಪಿಂಚಣಿಯು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಸಮಾನವಾಗಿರುತ್ತದೆ.
ಭಾರತೀಯ ವಾಯು ಪಡೆಯ ಈ 32 ಮಹಿಳಾ ಅಧಿಕಾರಿಗಳ ಕಾನೂನು ಹೋರಾಟ 12 ವರ್ಷಗಳ ಕಾಲ ನಡೆಯಿತು. ಅಂತಿಮವಾಗಿ ಪ್ರಕರಣದಲ್ಲಿ ಜಯ ಗಳಿಸಿದ ಸಂದರ್ಭ ಅವರು ನಿವೃತ್ತಿಯಾಗಿದ್ದಾರೆ. ಇವರಲ್ಲಿ ಮೂವರು ವಿಧವೆಯರು. ಇವರ ಪತಿಯಂದಿರು ದೇಶಕ್ಕೆ ಸೇವೆ ಸಲ್ಲಿಸುವ ಸಂದರ್ಭ ಮೃತಪಟ್ಟಿದ್ದರು. ಆದುದರಿಂದ ಈ ಮೂವರು ಅನುಕಂಪೆಯ ಆಧಾರದಲ್ಲಿ ಐಎಎಫ್ಗೆ ನೇಮಕಗೊಂಡಿದ್ದರು. ದಿಲ್ಲಿ ಉಚ್ಚ ನ್ಯಾಯಾಲಯ ಈ ಆದೇಶ ನೀಡುವ ಸಂದರ್ಭ ಬಬಿತಾ ಪುನಿಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಅವಲಂಬಿಸಿತು.
ಸುಪ್ರೀಂ ಕೋರ್ಟ್ನ(Supreme Court) ಈ ಆದೇಶದಲ್ಲಿ ಶಸಸ್ತ್ರ ಪಡೆಗಳು ನೇಮಕಾತಿಯಲ್ಲಿ ಮಹಿಳೆಯರಿಗೆ ತಾರತಮ್ಯ ಎಸಗುತ್ತಿವೆ. ಅವರು ಅರ್ಹರಾಗಿದ್ದರೂ ಕೆಲವು ಸ್ಥಾನಗಳಿಂದ ಹೊರಗಿಡಲಾಗಿದೆ ಎಂದು ಹೇಳಲಾಗಿದೆ.
ಸುಪ್ರೀಂ ಕೋರ್ಟ್ನ ಈ ಆದೇಶ ಶಸಸ್ತ್ರ ಪಡೆಗಳಲ್ಲಿ ಮಹಿಳಾ ಅಧಿಕಾರಿಗಳ ನೇಮಕಾತಿಯನ್ನು ಹೆಚ್ಚಿಸಲು ದಾರಿ ಮಾಡಿ ಕೊಟ್ಟಿತು. ಈ ಹಿಂದೆ ಮಹಿಳೆಯರ ಸೇವೆಯನ್ನು ಗರಿಷ್ಠ 10ರಿಂದ 14 ವರ್ಷಗಳಿಗೆ ಮಿತಿಗೊಳಿಸಲಾಗಿತ್ತು. ಆದರೆ, ಈಗ ಅವರು ಸಂಪೂರ್ಣ ವೃತ್ತಿ ಜೀವನವನ್ನು ಪೂರೈಸುವ ಅವಕಾಶವನ್ನು ಹೊಂದಿದ್ದಾರೆ.
ಇಂದು ತನ್ನ ಆದೇಶವನ್ನು ಅಂಗೀಕರಿಸುವಲ್ಲಿ, ದೆಹಲಿ ಹೈಕೋರ್ಟ್ ಸುಪ್ರೀಂ ಕೋರ್ಟ್ನ 2020 ರ ಬಬಿತಾ ಪುನಿಯಾ ಆದೇಶದ ಮೇಲೆ ಹೆಚ್ಚು ಅವಲಂಬಿತವಾಗಿದೆ, ಇದು ಸಶಸ್ತ್ರ ಪಡೆಗಳು ತಾರತಮ್ಯದ ನೇಮಕಾತಿ ಅಥವಾ ನೇಮಕಾತಿ ಅಭ್ಯಾಸಗಳನ್ನು ಹೊಂದಿವೆ ಎಂದು ಹೇಳಿದ್ದು, ಅವರು ಅರ್ಹರಾಗಿದ್ದ ಸ್ಥಾನಗಳಿಂದ ಹೊರಗಿಡಲಾಗಿದೆ.