ಶ್ರೀನಗರ: ಕಾರ್ಗಿಲ್‌ ಜಾಮಿಯಾ ಮಸೀದಿಯಲ್ಲಿ ಭಾರೀ ಅಗ್ನಿ ಅವಘಡ

Update: 2022-11-16 16:53 GMT

ಶ್ರೀನಗರ: ಲಡಾಖ್‌ನ ಕಾರ್ಗಿಲ್ ಜಿಲ್ಲೆಯ ಪ್ರಮುಖ ಮಸೀದಿಯಲ್ಲಿ ಇಂದು ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಬಹುತೇಕ ಭಾಗಕ್ಕೆ ಹಾನಿಯಾಗಿದೆ.

ಬೆಂಕಿ ಅವಘಡದ ದೃಶ್ಯ ವೈರಲ್‌ ಆಗಿದ್ದು, ಕಾರ್ಗಿಲ್‌ನ ಡ್ರಾಸ್‌ನಲ್ಲಿರುವ ಜಾಮಿಯಾ ಮಸೀದಿಯ ಸಂಪೂರ್ಣ ಆವರಣ ಮತ್ತು ಕಟ್ಟಡವನ್ನು ಬೆಂಕಿ ಆವರಿಸಿದೆ.

ಪೊಲೀಸರು, ನಿವಾಸಿಗಳು ಮತ್ತು ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಜನರು ಟ್ವೀಟ್ ಮಾಡಿದ್ದಾರೆ.

ನಂತರ, ಸೇನೆ, ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಯ ಸಹಾಯದಿಂದ ಬೆಂಕಿಯನ್ನು ನಂದಿಸಲಾಯಿತು. ಬೆಂಕಿಯಿಂದ ಮಸೀದಿಗೆ ಹೆಚ್ಚಿನ ಹಾನಿಯಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.  

Similar News