ಸಾಮಾಜಿಕ ಮಾಧ್ಯಮ ಕಂಪೆನಿಗಳು ಯಾವುದೇ ಪಕ್ಷವನ್ನು ಚುನಾವಣೆ ಗೆಲ್ಲುವಂತೆ ಮಾಡಬಹುದು: ರಾಹುಲ್‌ ಗಾಂಧಿ

Update: 2022-11-17 09:10 GMT

ಹೊಸದಿಲ್ಲಿ: ಸೋಷಿಯಲ್ ಮೀಡಿಯಾ ಕಂಪನಿಗಳು ಭಾರತದಲ್ಲಿ ಯಾವುದೇ ರಾಜಕೀಯ ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲುವಂತೆ ಮಾಡಬಹುದು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

"ಇವಿಎಂ [ವಿದ್ಯುನ್ಮಾನ ಮತಯಂತ್ರ] ಸುರಕ್ಷಿತವಾಗಿದ್ದರೂ, ಭಾರತೀಯ ಚುನಾವಣೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಬದಲಾವಣೆ ಮಾಡಬಹುದು" ಎಂದು ಗಾಂಧಿ ಹೇಳಿದ್ದಾರೆ. "ವ್ಯವಸ್ಥಿತ ಪಕ್ಷಪಾತವನ್ನು ಅಲ್ಲಿ ಅನ್ವಯಿಸಲಾಗುತ್ತಿದೆ ಮತ್ತು ನನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಅದಕ್ಕೆ ನೇರ ಉದಾಹರಣೆಯಾಗಿದೆ" ಎಂದು ಅವರು ಹೇಳಿದ್ದಾರೆ.

ತಮ್ಮ ಪಕ್ಷದ ಭಾರತ್ ಜೋಡೋ ಯಾತ್ರೆಯ ಮಹಾರಾಷ್ಟ್ರ ತಲುಪಿದ ಸಂದರ್ಭ ಮುಂಬೈನಲ್ಲಿ ನಾಗರಿಕ ಸಮಾಜದ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಗಾಂಧಿ ಈ ಹೇಳಿಕೆಗಳನ್ನು ನೀಡಿದರು.

ಜನವರಿಯಲ್ಲಿ, ಕೇಂದ್ರ ಸರ್ಕಾರದ ಒತ್ತಡದಿಂದಾಗಿ ತನ್ನ ಫಾಲೋವರ್ಸ್‌ ಗಳನ್ನು ಟ್ವಿಟರ್‌ನಲ್ಲಿ ಸೀಮಿತಗೊಳಿಸಲಾಗಿದೆ ಎಂದು ಗಾಂಧಿ ಆರೋಪಿಸಿದ್ದರು.

ಟ್ವಿಟರ್‌ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಕಚೇರಿ ಪರಾಗ್ ಅಗರವಾಲ್‌ಗೆ ಪತ್ರ ಬರೆದಿರುವ ಗಾಂಧಿ, ತಮ್ಮ ಖಾತೆಯು 2 ಕೋಟಿ ಫಾಲೋವರ್ಸ್‌ ಗಳನ್ನು ಹೊಂದಿದೆ ಮತ್ತು ಪ್ರತಿದಿನ ಸರಾಸರಿ 8,000 ರಿಂದ 10,000 ಫಾಲೋವರ್ಸ್‌ ಗಳು ಸೇರುತ್ತಿದ್ದಾರೆ" ಎಂದು ಉಲ್ಲೇಖಿಸಿದ್ದರು.

"ನಂತರ ಏನೋ ವಿಚಿತ್ರ ಸಂಭವಿಸಿದೆ," ಅವರು ಬರೆದಿದ್ದರು. 

ದಲಿತ ಬಾಲಕಿಯ ಮೇಲಿನ ಅತ್ಯಾಚಾರ, ರೈತರ ಪ್ರತಿಭಟನೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಂತಹ ವಿಷಯಗಳ ಬಗ್ಗೆ ಟ್ವೀಟ್ ಮಾಡಿದ ನಂತರ ಇದು ಸಂಭವಿಸಿದೆ ಎಂದು ಗಾಂಧಿ ಹೇಳಿಕೊಂಡಿದ್ದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಅತ್ಯಾಚಾರಕ್ಕೊಳಗಾದ ದಲಿತ ಬಾಲಕಿಯ ಕುಟುಂಬದ ಗುರುತನ್ನು ಬಹಿರಂಗಪಡಿಸುವ ಫೋಟೋವನ್ನು ಹಂಚಿಕೊಂಡಿದ್ದಕ್ಕಾಗಿ ಅವರ ಖಾತೆಯನ್ನು ಲಾಕ್ ಮಾಡಲಾಗಿದೆ. ಒಂದು ವಾರದ ನಂತರ ಖಾತೆಯನ್ನು ಮರುಸ್ಥಾಪಿಸಲಾಗಿತ್ತು.

Similar News