×
Ad

ಶೀಘ್ರದಲ್ಲೇ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಗಳಿಗೆ ಕ್ಯೂಆರ್ ಕೋಡ್

Update: 2022-11-17 21:50 IST

ಹೊಸದಿಲ್ಲಿ,ನ.17: ಗೃಹಬಳಕೆಯ ಸಿಲಿಂಡರ್ ಗಳ ವಿತರಣೆಯನ್ನು ನಿಯಂತ್ರಿಸುವ ಕ್ರಮವಾಗಿ ಶೀಘ್ರದಲ್ಲೇ ಕ್ಯೂಆರ್ ಕೋಡ್‌ಗಳನ್ನು ಒಳಗೊಂಡ ಎಲ್ಪಿಜಿ ಸಿಲಿಂಡರ್ ಗಳು ಬರಲಿವೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಸೂರಿ ಬುಧವಾರ ತಿಳಿಸಿದ್ದಾರೆ.

ಈ ಉಪಕ್ರಮದಿಂದಾಗಿ ಅಡುಗೆ ಅನಿಲ ಸಿಲಿಂಡರ್ಗಳ ಕಳ್ಳತನ, ಅಕ್ರಮ ಮಾರಾಟ ತಡೆಯಲು ಹಾಗೂ ಉತ್ತಮ ನಿರ್ವಹಣೆಗೆ ನೆರವಾಗಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಉತ್ತರಪ್ರದೇಶದಲ್ಲಿ ನಡೆದ ‘ ವಿಶ್ವ ಎಲ್ಪಿಜಿ ಸಪ್ತಾಹ 2022’ದಲ್ಲಿ ತಾನು ಅಧಿಕಾರಿಗಳ ಜೊತೆ ಸಂವಾದ ನಡೆಸುತ್ತಿರುವ ಹಾಗೂ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಗಳಲ್ಲಿ ಕ್ಯೂ.ಆರ್.ಕೋಡ್ ಆಳವಡಿಸುವ ಕಾರ್ಯ ಸಾಧ್ಯತೆಗಳ ಬಗ್ಗೆ ಚರ್ಚಿಸುವ ವಿಡಿಯೋವನ್ನು ಕೂಡಾ ಸಚಿವ ಹರದೀಪ್ ಸಿಂಗ್ ಅವರು ಟ್ವಿಟ್ಟರ್ ನಲ್ಲಿ ಪ್ರಸಾರ ಮಾಡಿದ್ದಾರೆ.

ಮುಂಬರುವ ತಿಂಗಳುಗಳಲ್ಲಿ ಕ್ಯೂ.ಆರ್.ಕೋಡ್‌ಗಳನ್ನು ಅಳವಡಿಸಲಾಗಿರುವ 14.2 ಕೆ.ಜಿ.ಯ ಒಟ್ಟು 20 ಸಾವಿರ ಎಲ್ಪಿಜಿ ಸಿಲಿಂಡರ್ಗಳ ಮೊದಲ ತಂಡವನ್ನು ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಪುರಿ ತಿಳಿಸಿದ್ದಾರೆ.

ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಹಾಗೂ ಪರಿಶುದ್ಧವಾದ ಇಂಧನ ಲಭ್ಯತೆಯ ಅಗತ್ಯದ ಬಗ್ಗೆಯೂ ಅವರು ಕಾರ್ಯಕ್ರಮದಲ್ಲಿ ಒತ್ತಿ ಹೇಳಿದರು. ಎಲ್ಪಿಜಿ ಇಂಧನ ಮಿಶ್ರಣ, ದಕ್ಷತೆ, ಸಂರಕ್ಷಣೆ, ಜೈವಿಕ ಎಲ್ಪಿಜಿ, ಸಿಂಥೆಟಿಕ್ ಎಲ್ಪಿಜಿಯ ಅಧಿಕ ಬಳಕೆಯು, ಆರ್ಥಿಕ ಬೆಳವಣಿಗೆಗೆ ಹಾಗೂ ಹವಾಮಾನ ಬದಲಾವಣೆ ವಿರುದ್ದದ ಹೋರಾಟದಲ್ಲಿ ಪ್ರಗತಿ ಸಾಧಿಸಲು ನೆರವಾಗಲಿದೆ ಎಂದು ಪುರಿ ಪ್ರತಿಪಾದಿಸಿದರು.

Similar News