ಭೀಮಾ ಕೋರೆಗಾಂವ್‌ ಪ್ರಕರಣ: ಆರೋಪಿ ಆನಂದ್‌ ತೇಲ್ತುಂಬ್ಡೆಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್

Update: 2022-11-18 08:26 GMT

ಮುಂಬೈ: ಭೀಮಾ ಕೋರೆಗಾಂವ್-ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ(UAPA) ದಾಖಲಾಗಿರುವ ಮಾಜಿ ಐಐಟಿ ಪ್ರೊಫೆಸರ್ ಮತ್ತು ದಲಿತ ವಿದ್ವಾಂಸ ಪ್ರೊ.ಆನಂದ್ ತೇಲ್ತುಂಬ್ಡೆ ಅವರಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.

2021ರಲ್ಲಿ ವಿಶೇಷ ಎನ್‌ಐಎ ನ್ಯಾಯಾಲಯ ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ತೇಲ್ತುಂಬ್ಡೆ ಸಲ್ಲಿಸಿದ್ದ ಮೇಲ್ಮನವಿಯ ಮೇಲೆ ನ್ಯಾಯಮೂರ್ತಿಗಳಾದ ಎಎಸ್ ಗಡ್ಕರಿ ಮತ್ತು ಮಿಲಿಂದ್ ಜಾಧವ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಸುಪ್ರೀಂ ಕೋರ್ಟ್ ಆದೇಶದ ನಂತರ 73 ವರ್ಷದ ಅವರನ್ನು ಏಪ್ರಿಲ್ 14, 2020 ರಂದು NIA ಬಂಧನಕ್ಕೊಳಪಡಿಸಿತ್ತು.

ಯುಎಪಿಎಯ ಸೆಕ್ಷನ್ 13 (ಕಾನೂನುಬಾಹಿರ ಚಟುವಟಿಕೆಗಳಿಗೆ ಶಿಕ್ಷೆ), 16 (ಭಯೋತ್ಪಾದಕ ಕೃತ್ಯಕ್ಕೆ ಶಿಕ್ಷೆ), ಮತ್ತು 18 (ಪಿತೂರಿಗಾಗಿ ಶಿಕ್ಷೆ) ಅಡಿಯಲ್ಲಿ ಪ್ರಾಥಮಿಕ ಅಪರಾಧಗಳನ್ನು ಮಾಡಲಾಗಿಲ್ಲ ಮತ್ತು ಕೇವಲ ಸೆಕ್ಷನ್ 38 ಮತ್ತು 39 (ಭಯೋತ್ಪಾದಕ ಸಂಘಟನೆಗೆ ಸದಸ್ಯತ್ವ ಮತ್ತು ಬೆಂಬಲ) ಅನ್ವಯಿಸುತ್ತದೆ ಎಂದು ನ್ಯಾಯಾಲಯವು ಗಮನಿಸಿದೆ. 1 ಲಕ್ಷ ರೂ. ಮತ್ತು ಇಬ್ಬರ ಶ್ಯೂರಿಟಿ ಪಿಆರ್ ಬಾಂಡ್ ಜಾರಿಯಲ್ಲಿ ಜಾಮೀನು ನೀಡಲಾಗಿದೆ. ಆದಾಗ್ಯೂ, ನ್ಯಾಯಾಲಯವು ಸುಪ್ರೀಂಕೋರ್ಟ್‌ ಅನ್ನು ಸಂಪರ್ಕಿಸಲು ಎನ್‌ಐಎಗೆ ಒಂದು ವಾರ ಕಾಲಾವಕಾಶ ನೀಡಿದೆ ಮತ್ತು ಅಲ್ಲಿಯವರೆಗೆ ಜಾಮೀನು ಆದೇಶಕ್ಕೆ ತಡೆ ನೀಡಿದೆ.

Similar News