ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ 13 ಸದಸ್ಯರ ಪ್ರಮುಖ ತಂಡದ ಪುನರ್‌ ರಚನೆ

Update: 2022-11-18 16:51 GMT

ಹೊಸದಿಲ್ಲಿ, ನ.18: ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ (ಎನ್ಎಚ್ಆರ್ಸಿ)ಯು ಮಾನವಹಕ್ಕುಗಳ ಸಂರಕ್ಷಕರು ಹಾಗೂ ಎನ್ಜಿಓಗಳನ್ನೊಳಗೊಂಡ 13 ಮಂದಿ ಸದಸ್ಯರ ಪ್ರಧಾನ ತಂಡವನ್ನು ಪುನಾರಚಿಸಿದೆ. ಬಿಜೆಪಿಯ ಮಾಜಿ ಶಾಸಕ, ಪದ್ಮಶ್ರೀ ಪುರಸ್ಕೃತ ಜಿತೇಂದ್ರ ಸಿಂಗ್ ಶಂಟಿ, ಹಕ್ಕುಗಳು ಹಾಗೂ ಅಪಾಯ ವಿಶ್ಲೇಷಣೆ ತಂಡ (ಆರ್ಆರ್ಎಜಿ)ದ ಸುಹಾಸ್ ಚಕ್ಮಾ  ಹಾಗೂ ಮಾಜಿ ರಾಯಭಾರಿ ಭಾಸ್ವತಿ ಮುಖರ್ಜಿ ಈ ಪುನಾರಚಿತ ತಂಡದಲ್ಲಿದ್ದಾರೆ.

ಎನ್ಎಚ್ಆರ್ಸಿ ಹಾಗೂ ಎನ್ಜಿಓಗಳ ನಡುವೆ ಸಹಕಾರವೇರ್ಪಡಬೇಕಾದ ಕ್ಷೇತ್ರಗಳನ್ನು ಗುರುತಿಸುವುದು, ನಾಗರಿಕ ಸಮಾಜದೊಂದಿಗೆ ಎನ್ಎಚ್ಆರ್ಸಿಯ ಅರ್ಥಪೂರ್ಣ ಒಡನಾಟವನ್ನು ಬೆಳೆಸಲು ಕಾರ್ಯತಂತ್ರಗಳನ್ನು ರೂಪಿಸುವುದು ಈ ತಂಡದ ಕೆಲಸವಾಗಿದೆ.

ತಂಡದ ಸದಸ್ಯರಲ್ಲೊಬ್ಬದ ಜಿತೇಂದ್ರ ಸಿಂಗ್ ಶಂಟಿ ಅವರು ಕೋವಿಡ್19 ಎರಡನೆ ಅಲೆಯ ಸಂದರ್ಭದಲ್ಲಿ ಸೋಂಕಿನಿಂದ ಮೃತಪಟ್ಟ ನೂರಾರು ಮಂದಿಯನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡುವ ಮೂಲಕ  ದೇಶದ ಗಮನಸೆಳೆದಿದ್ದರು. ಅವರು ಸ್ಥಾಪಿಸಿರುವ ಶಹೀದ್ ಭಗವತ್‌ ಸಿಂಗ್ ಸೇವಾದಳವು ಕಳೆದ 25 ವರ್ಷಗಳಿಂದ ವಾರಸುದಾರರಿಲ್ಲದ ಶವಗಳನ್ನು ಅಂತ್ಯಸಂಸ್ಕಾರ ಮಾಡುವ ಉದಾತ್ತ ಕಾರ್ಯವನ್ನು ನಡೆಸುತ್ತಾ ಬಂದಿದೆ.

Similar News