×
Ad

ಆಂಟಿಮೈಕ್ರೊಬಿಯಲ್ ಜಾಗೃತಿಗಾಗಿ ಸೈಕಲ್ ಜಾಥ

Update: 2022-11-19 19:26 IST

ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆ, ಉಡುಪಿ ಟಿಎಂಎ ಪೈ ಆಸ್ಪತ್ರೆ ಹಾಗೂ ಭಾರತೀಯ ವೈದ್ಯರ ಸಂಘ ಉಡುಪಿ ಕರಾವಳಿ ಶಾಖೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಆಂಟಿಮೈಕ್ರೊಬಿಯಲ್ ಪ್ರತಿರೋಧಕ ಜಾಗೃತಿ ಸಪ್ತಾಹ ಪ್ರಯುಕ್ತ ಸಮುದಾಯದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನ.20ರಂದು ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಡಾ.ಟಿಎಂಎ ಪೈ ಆಸ್ಪತ್ಪೆಯ ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈಕಲ್ ಜಾಥಾಕ್ಕೆ ಬೆಳಗ್ಗೆ ೬:೪೫ಕ್ಕೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಹೊರ ರೋಗಿ ವಿಭಾಗದ ಮುಂಭಾಗದಲ್ಲಿ ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್ ಚಾಲನೆ ನೀಡಲಿರುವರು ಎಂದರು.  

ಆಂಟಿಮೈಕ್ರೊಬಿಯಲ್ ಪ್ರತಿರೋಧವನ್ನು ತಡೆಗಟ್ಟುವುದು ಎಲ್ಲರ ಜವಾ ಬ್ದಾರಿಯಾಗಿದೆ. ವೈದ್ಯರ ಔಷಧ ಚೀಟಿ ಇಲ್ಲದೆ ಆ್ಯಂಟಿಬಯೋಟಿಕ್ ತೆಗೆದು ಕೊಳ್ಳದಿರುವುದು, ವೈದ್ಯರ ಸಲಹೆಯಂತೆ ಡೋಸ್ ಪೂರ್ಣಗೊಳಿಸುವುದು, ವೈದ್ಯರ ಔಷಧ ಚೀಟಿ ಇಲ್ಲದೆ ಔಷಧಾಲಯಗಳಿಂದ ಆ್ಯಂಟಿ ಬಯೋಟಿಕ್ ಖರೀದಿಸದಿರುವುದು, ಉಳಿದಿರುವ ಪ್ರತಿಜೀವಕಗಳನ್ನು ಸರಿಯಾಗಿ ವಿಲೇವಾರಿ ಮಾಡದಿರುವುದು ಪ್ರಮುಖ ಅಂಶವಾಗಿದೆ ಎಂದು ಅವರು ಹೇಳಿದರು.

ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ವಿರುದ್ಧದ ಹೋರಾಟವು ಸಾರ್ವಜನಿಕರು, ವೈದ್ಯರು, ಔಷಧಿಕಾರರು, ಪಶುವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಲ್ಲಿ ಜಾಗೃತಿ ಮೂಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಅದೇ ರೀತಿ ಈ ವಾರದಲ್ಲಿ ವೈದ್ಯಕೀಯ ಔಷಧಿಕಾರರಿಗೆ ಕಾರ್ಯಾಗಾರವನ್ನು ಆಯೋಜಿಸ ಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಣಿಪಾಲ ಕೆಎಂಸಿಯ ಅಸೋಸಿಯೇಟ್ ಡೀನ್ ಡಾ. ಚಿರೊಂಜಯ್ ಮುಖ್ಯೋಪಾಧ್ಯಾಯ, ಡಾ.ವಿಜಯ ಕುಮಾರ್, ಡಾ. ವಂದನಾ, ಡಾ.ಮಾಧವ ಉಪಸ್ಥಿತರಿದ್ದರು.

Similar News