ರಾಜಸ್ಥಾನ: ಮೂವರು ಬಿಎಸ್‌ಎಫ್ ಯೋಧರ ಸಹಿತ ಐವರಿಂದ ಮಹಿಳೆಯ ಸಾಮೂಹಿಕ ಅತ್ಯಾಚಾರ

Update: 2022-11-19 17:05 GMT

ಜೈಪುರ, ನ. 19:  ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯಲ್ಲಿ ಮಹಿಳೆಯೋರ್ವರ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಲ್ಲಿ ಗಡಿ ಭದ್ರತಾ ಪಡೆಯ ಮೂವರು ಯೋಧರು ಸೇರಿದಂತೆ ಐವರನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಘಟನೆಯ ಕುರಿತು ಸಂತ್ರಸ್ತ ಮಹಿಳೆ ರಾಯ್‌ಸಿಂಗ್ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಅನಂತರ ಎಫ್‌ಐಆರ್ ದಾಖಲಿಸಲಾಯಿತು. ಮಹಿಳೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 
ಮ್ಯಾಜಿಸ್ಟ್ರೇಟ್ ಮುಂದೆ ಮಹಿಳೆಯ ಹೇಳಿಕೆಗಳನ್ನು ದಾಖಲು ಮಾಡಿಕೊಂಡ ಬಳಿಕ ಐವರು ಆರೋಪಿಗಳನ್ನು ಬಂಧಿಸಲಾಗಿದೆ.   
ಆರೋಪಿಗಳಲ್ಲಿ ಗಡಿ ಭದ್ರತಾ ಪಡೆಯ ಓರ್ವ ಹೆಡ್ ಕಾನ್ಸ್‌ಟೆಬಲ್ ಹಾಗೂ ಇಬ್ಬರು ಕಾನ್ಸ್‌ಟೆಬಲ್ ಕೂಡ ಸೇರಿದ್ದಾರೆ ಎಂದು ಶ್ರೀಗಂಗಾನಗರದ ಎಸ್‌ಪಿ ಆನಂದ್ ಶರ್ಮಾ ಅವರು ಹೇಳಿದ್ದಾರೆ.

Similar News