ಗೌತಮ್ ನವ್ಲಾಖಾ ಕಾರಾಗೃಹದಿಂದ ಬಿಡುಗಡೆ

Update: 2022-11-19 17:43 GMT

ಮುಂಬೈ, ನ. 19:  ಎಲ್ಗಾರ್ ಪರಿಷದ್-ಮಾವೋವಾದಿ ನಂಟು ಪ್ರಕರಣದ ಆರೋಪಿಯಾಗಿರುವ ಗೌತಮ್ ನವ್ಲಾಖಾ ಅವರು ಶನಿವಾರ ಸಂಜೆ ನವಿ ಮುಂಬೈಯ ತಲೋಜಾ ಕಾರಾಗೃಹದಿಂದ ಬಿಡುಗಡೆಗೊಂಡಿದ್ದಾರೆ. 

ಅವರು ಮುಂದಿನ ಒಂದು ತಿಂಗಳು ಕಾಲ ಗೃಹ ಬಂಧನದಲ್ಲಿ ಇರಲಿದ್ದಾರೆ. ಕಾರಾಗೃಹದಿಂದ ಬಿಡುಗಡೆಯಾದ ಕೂಡಲೇ ಪೊಲೀಸರ ತಂಡ ಗೌತಮ್ ನವ್ಲಾಖಾ ಅವರನ್ನು ಅವರು ವಾಸಿಸಲಿರುವ ನವಿ ಮುಂಬೈಯ ಬೇಲಾಪುರ್-ಅಗ್ರೋಲಿ ಪ್ರದೇಶಕ್ಕೆ ಕರೆದೊಯ್ದಿತು. 

ಗೌತಮ್ ನವ್ಲಾಖಾ ಅವರು ಸಂಜೆ ಸುಮಾರು 6 ಗಂಟೆಗೆ ಕಾರಾಗೃಹದಿಂದ ಬಿಡುಗಡೆಯಾದರು ಎಂದು ಕಾರಾಗೃಹದ ಅಧಿಕಾರಿ ತಿಳಿಸಿದ್ದಾರೆ. ಗೌತಮ್ ನವ್ಲಾಖಾ ಅವರ ಗೃಹ ಬಂಧನವನ್ನು ವಿರೋಧಿಸಿ ಎನ್‌ಐಎ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿತ್ತು. ಮುಂದಿನ 24 ಗಂಟೆಗಳ ಒಳಗೆ ಗೌತಮ್ ನವ್ಲಾಖಾ ಅವರನ್ನು ಗೃಹ ಬಂಧನದಲ್ಲಿ ಇರಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.

Similar News