ಫಿಫಾ ವಿಶ್ವಕಪ್: ಇರಾನ್‌ ವಿರುದ್ಧ ಇಂಗ್ಲೆಂಡ್‌ ಗೆ ಗೆಲುವು

Update: 2022-11-21 15:39 GMT

ದೋಹಾ: ಹಲವಾರು ವೈಶಿಷ್ಟ್ಯತೆಗಳೊಂದಿಗೆ ಆರಂಭವಾಗಿರುವ ಖತರ್‌ ನ ಫಿಫಾ ವಿಶ್ವಕಪ್‌ ಪಂದ್ಯಾಕೂಟದ ಮೊದಲ ಪಂದ್ಯದಲ್ಲಿ ಆತಿಥೇಯ ಖತರ್‌ ತಂಡದ ವಿರುದ್ಧ ಈಕ್ವೆಡಾರ್ ಜಯ ಸಾಧಿಸಿತ್ತು. ಇದೀಗ ಗ್ರೂಪ್- ಬಿ ವಿಭಾಗದ ಪಂದ್ಯಾಟದಲ್ಲಿ ಇರಾನ್‌ ವಿರುದ್ಧ ಇಂಗ್ಲೆಂಡ್‌ 6-2 ಅಂತರದಿಂದ ಗೆಲುವು ಸಾಧಿಸಿದೆ. ಮೊದಲಾರ್ಧದಲ್ಲೇ ಮೂರು ಗೋಲುಗಳನ್ನು ಇಂಗ್ಲೆಂಡ್‌ ದಾಖಲಿಸಿದ್ದು ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿತ್ತು.

35ನೇ ನಿಮಿಷದಲ್ಲಿ ಜೂಡ್‌ ಬೆಲ್ಲಿಂಗ್ಹಾಂ ಗೋಲು ಬಾರಿಸಿದರೆ, 43ನೇ ಹಾಗೂ 62ನೇ ನಿಮಿಷದಲ್ಲಿ ಬುಕಾಯೋ ಸಾಕಾ ಆಕರ್ಷಕವಾಗಿ ಚೆಂಡನ್ನು ಗುರಿ ಸೇರಿಸಿದರು. ನಾಲ್ಕನೇ ಗೋಲ್‌ ರಹೀಂ ಸ್ಟೆರ್ಲಿಂಗ್‌ ರಿಂದ ಹರಿದು ಬಂತು. ಮಾರ್ಕಸ್‌ ರ್ಯಾಶ್‌ಫೋರ್ಡ್‌ ಹಾಗೂ ಜಾಕ್‌ ಗೀಲಿಶ್‌ ಕ್ರಮವಾಗಿ ಐದು ಮತ್ತು ಆರನೇ ಗೋಲು ಬಾರಿಸಿದರು. ಇರಾನ್‌ ಪರವಾಗಿ ದ್ವಿತೀಯಾರ್ಧದಲ್ಲಿ ಮೆಹ್ದಿ ತರೇಮಿ ಎರಡು ಗೋಲು ದಾಖಲಿಸಿದರು. ಗ್ರೂಪ್‌ ಬಿ ಯ ಪಂದ್ಯಾಟ ಇದಾಗಿದ್ದು, ಇಂಗ್ಲೆಂಡ್., ಯುಎಸ್‌ಎ, ವೇಲ್ಸ್‌ ಹಾಗೂ ಇರಾನ್‌ ತಂಡವು ಗ್ರೂಪ್‌ ಬಿʼ ಯಲ್ಲಿದೆ. 

Similar News