×
Ad

ದೇಶಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಇನ್ನು ಮುಂದೆ ಏರ್‌ ಸುವಿಧಾ ಅಗತ್ಯವಿಲ್ಲ

Update: 2022-11-21 22:40 IST

ಹೊಸದಿಲ್ಲಿ, ನ. 21: ದೇಶಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರು ಇನ್ನು ಮುಂದೆ ಏರ್ ಸುವಿಧಾ ಪೋರ್ಟಲ್(Portal) ನಲ್ಲಿ ಕೋವಿಡ್ ಲಸಿಕೆ ಸ್ವೀಕರಿಸಿದ ಸ್ವಘೋಷಣಾ ಫಾರಂ ಅನ್ನು  ಭರ್ತಿ ಮಾಡುವ ಅಗತ್ಯತೆ ಇಲ್ಲ ಎಂದು ಸರಕಾರ ಹೇಳಿದೆ. ಈ ನಿರ್ಧಾರ ಸೋಮವಾರ ರಾತ್ರಿಯಿಂದ ಜಾರಿಗೆ ಬರಲಿದೆ. 


ಕೋವಿಡ್ ಸಾಂಕ್ರಾಮಿಕ ಹರಡುವಿಕೆಯಲ್ಲಿ ಸ್ಥಿರವಾದ ಇಳಿಕೆ, ದೇಶ ಹಾಗೂ ಜಾಗತಿಕವಾಗಿ ಕೋವಿಡ್ ಲಸೀಕೀಕರಣದಲ್ಲಿ ಗಣನೀಯ ಪ್ರಗತಿ ಕಂಡು ಬಂದಿರುವುದರಿಂದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಪರಿಷ್ಕೃತ ‘‘ಅಂತಾರಾಷ್ಟ್ರೀಯ ಆಗಮನ ಮಾರ್ಗಸೂಚಿ’’("International Arrivals Guide")ಯನ್ನು ಬಿಡುಗಡೆಗೊಳಿಸಿದೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯ ಸೋಮವಾರ ಸಂಜೆ ನೋಟಿಸಿನಲ್ಲಿ ತಿಳಿಸಿದೆ. 

ಆಲೈನ್ ಏರ್ ಸುವಿಧಾ ಪೋರ್ಟಲ್(Portal) ನಲ್ಲಿ ಸ್ವಘೋಷಣೆಯ ಫಾರಂಗಳನ್ನು ಸಲ್ಲಿಸುವುದನ್ನು ನಿಲ್ಲಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಪರಿಷ್ಕೃತ ಮಾರ್ಗಸೂಚಿಯ ತಿಳಿಸಿದೆ.

Similar News