ಸದಾನಂದ ಬೈಂದೂರ್‌ಗೆ ಪಿಎಚ್‌ಡಿ ಪದವಿ

Update: 2022-11-21 17:22 GMT

ಬೈಂದೂರು: ಬೀಜಾಡಿ ಸರಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಸದಾನಂದ ಬೈಂದೂರ್ ಬಸ್ರೂರು ಶ್ರೀಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಂ.ದಿನೇಶ ಹೆಗ್ಡೆ ಮಾರ್ಗದರ್ಶನದಲ್ಲಿ ಮಂಡಿಸಿದ ‘ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ- 2009 ಮತ್ತು ಸಾಮಾಜಿಕ ನ್ಯಾಯ : ಉಡುಪಿ ಜಿಲ್ಲೆಯನ್ನು ಅನುಲಕ್ಷಿಸಿ’ ವಿಷಯದ ಕುರಿತ ಸಂಶೋಧನಾ ಮಹಾಪ್ರಬಂಧಕ್ಕಾಗಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ವಿಭಾಗದ ಅನ್ವಯಿಕ ಜಾನಪದ ನಿಕಾಯದಡಿಯಲ್ಲಿ ಪಿಎಚ್‌ಡಿ ಪದವಿ ನೀಡಿದೆ.

ಮೂಲತಃ ಬೈಂದೂರಿನವರಾಗಿರುವ ಸದಾನಂದ, 17 ವರ್ಷ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, 10 ವರ್ಷ ಪ್ರೌಢಶಾಲಾ ಶಿಕ್ಷಕರಾಗಿ ಹಾಗೂ 5 ವರ್ಷಗಳ ಕಾಲ ಕುಂದಾಪುರ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರು ವೆಂಕಮ್ಮ ಹಾಗೂ ಗೋವಿಂದ ನಾಯ್ಕ ದಂಪತಿ ಪುತ್ರ.

Similar News